Breaking News

ಕಾಂತಾರದ ರೊಮ್ಯಾಂಟಿಕ್ ಸಾಂಗ್ ವೈರಲ್..!

ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್....

SHARE......LIKE......COMMENT......

ಬೆಂಗಳೂರು:

ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದೆ. ರಿಷಬ್ ಶೆಟ್ಟಿ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು ಸಿನಿಮಾಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಭಿನಯ, ಹಾಡು, ಚಿತ್ರೀಕರಣ, ಛಾಯಾಗ್ರಹಣ ಸೇರಿ ಸಂಪೂರ್ಣ ಸಿನಿಮಾವನ್ನೇ ಮೆಚ್ಚಿಕೊಂಡು ಪಾಸಿಟಿವ್ ರಿವ್ಯೂ ಕೊಡುತ್ತಿದ್ದಾರೆ ಪ್ರೇಕ್ಷಕರು. ಸಿನಿಮಾ ವ್ಯಾಪಕ ಮೆಚ್ಚುಗೆ ಗಳಿಸುವುದರ ಜೊತೆಗೆ ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ರೇಸ್​ ಸ್ಪೀಡ್ ಹೆಚ್ಚಿಸುತ್ತಲೇ ಇದೆ. ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಕಾಂತಾರ ಫಿವರ್ ಶುರು ಮಾಡಿದೆ.

ಸದ್ಯ ಸ್ಯಾಂಡಲ್​ವುಡ್ (Sandalwood) ಮಂದಿ ಕಾಂತಾರ ಗುಂಗಿನಲ್ಲಿದ್ದಾರೆ. ಈಗಾಗಲೇ ಸಕ್ಸಸ್ ಖುಷಿಯಲ್ಲಿರುವ ಚಿತ್ರತಂಡಕ್ಕೆ ಇನ್ನೊಂದು ಖುಷಿ ಸಿಕ್ಕಿದ್ದು ಈ ಸಿನಿಮಾದ ಸಿಂಗಾರ ಸಿರಿಯೇ ಹಾಡು ಸೂಪರ್ ಹಿಟ್ ಆಗಿದೆ. ಸ್ಪಾಟಿಫೈನಲ್ಲಿ (Spotify) ಹಾಡು ಲಭ್ಯವಿದ್ದು ಇದು ನಂಬರ್ ವನ್ ಪಟ್ಟವನ್ನು ಅಲಂಕರಿಸಿದೆ. ಈ ಗುಡ್ ನ್ಯೂಸ್​ನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಫೇಸ್​​ಬುಕ್ ಪೇಜ್​ನಲ್ಲಿ ಶೇರ್ ಮಾಡಲಾಗಿದೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಅನನ್ಯಾ ಭಟ್, ವಿಜಯ್ ಪ್ರಕಾಶ್, ನಾಗರಾಜ್ ಪನರ್ ಅವರು ಹಾಡಿದ್ದಾರೆ.ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೂಡ ಮಾಂಸಾಹಾರ ತ್ಯಜಿಸಿದ್ದರು. ದೈವದ ಆರಾಧನೆಯೊಂದಿಗೆ ಸಂಗೀತ ಸಂಯೋಜನೆಗೂ ಕುಳಿತು ಕೊಳ್ಳುತ್ತಿದ್ದರು. ನಾನು ನಾನ್​ ವೆಜ್ ಬಿಟ್ಟಿದ್ದೇನೆ. ಚಿತ್ರದ ಅದರಲ್ಲೂ ದೈವದ ಹಾಡುಗಳನ್ನ ಮಾಡೋವಾಗ ಹೆಚ್ಚು ಕಡಿಮೆ ಎರಡು ತಿಂಗಳು ನಾನ್​ ವೆಜ್​ ಬಿಟ್ಟು ಹಾಡುಗಳನ್ನ ಸಂಯೋಜಿಸಿದ್ದೇನೆ ಎಂದು ಅವರು ತಮ್ಮ ಹಾಡಿನ ಬಗ್ಗೆ ಹೇಳಿದ್ದಾರೆ.

ಬೇರೆ ಭಾಷೆಗೆ ಡಬ್ಬಿಂಗ್:

ಸದ್ಯ ಕಾಂತಾರ ಸಿನಿಮಾದ ಪ್ರಯಾಣದಲ್ಲಿರೋ ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಚಿತ್ರ ಬೇರೆ ಭಾಷೆಗೂ ಡಬ್ ಆಗುತ್ತದೆ ಅಂತಲೇ ಹೇಳಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲು ಈ ಸಿನಿಮಾ ಡಬ್ ಆಗುತ್ತಿದೆ. ಈಗಾಗಲೇ ಆಯಾ ಭಾಷೆಯ ಸಿನಿಮಾ ವಿತರಕರು ಈ ಬೇಡಿಕೆಯನ್ನ ಹೊಂಬಾಳೆ ಪ್ರೋಡಕ್ಷನ್ ಹೌಸ್ ಅನ್ನ ಸಂಪರ್ಕಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಪ್ರೋಡಕ್ಷನ್ ಹೌಸ್ ತಮ್ಮ ಸಿನಿಮಾದ ಇತರ ಭಾಷೆಯ ಡಬ್ಬಿಂಗ್ ರಿಲೀಸ್ ಬಗ್ಗೆ ಮಾಹಿತಿ ಕೊಡಲಿದೆ ಎಂದು ರಿಷಬ್ ಈಗ ಹೇಳಿಕೊಂಡಿದ್ದಾರೆ……