Breaking News

ಅಕ್ಷಯ್‌ ಆಕ್ಷನ್‌ ಸೂಪರ್‌ ಎಂದ ಫ್ಯಾನ್ಸ್‌..!

ʼರಾಮ ಸೇತುʼ ಟೀಸರ್ ರಿಲೀಸ್‌....

SHARE......LIKE......COMMENT......

ಬೆಂಗಳೂರು :

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ʼರಾಮ ಸೇತುʼ ಸಿನಿಮಾದ ಟೀಸರ್ ಬಿಡುಗಡೆಗೊಂಡಿದ್ದು, ಆಕ್ಷನ್‌ ಜೊತೆಗೆ ಅದ್ಭುತ ಹಿನ್ನೆಲೆ ಸಂಗೀತ ವಿರುವ ವಿಡಿಯೋ ತುಣುಕು ನೋಡಿದ ಅಭಿಮಾನಿಗಳು ನೆಕ್ಸ್‌ ಲೆವೆಲ್‌ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಿನಿಮಾದ ಟೀಸರ್‌ನ್ನು ನಟ ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ “ರಾಮ್ ಸೇತು ಕಿ ಪೆಹ್ಲಿ ಝಲಕ್..(ರಾಮ ಸೇತು ಮೊದಲ ಝಲಕ್‌) ನಿಮಗಾಗಿ ಮಾತ್ರ. ಇದನ್ನು ತುಂಬಾ ಪ್ರೀತಿಯಿಂದ ಮಾಡಿದ್ದೇವೆ, ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ. ಬತಾನಾ ಜರೂರ್(ಬೇಗ ಹೇಳಿ). ರಾಮ ಸೇತು ಅಕ್ಟೋಬರ್ 25. ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ.” ಎಂದು ಬರೆದುಕೊಂಡಿದ್ದಾರೆ. ಅಭಿಷೇಕ್ ಶರ್ಮಾ ನಿರ್ದೇಶನದ ಈ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನುಶ್ರತ್ ಭರುಚ್ಚ ಮತ್ತು ಸತ್ಯ ದೇವ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಅಕ್ಟೋಬರ್ 25, 2022 ರಂದು ಬಿಡುಗಡೆಯಾಗಲಿದೆ.

ʼರಾಮ ಸೇತುʼ ಕಥೆಯು ನಾಸ್ತಿಕ ಪುರಾತತ್ತ್ವ ಶಾಸ್ತ್ರಜ್ಞ ಆರ್ಯನ್ ಕುಲಶ್ರೇಷ್ಠ (ಅಕ್ಷಯ್ ಕುಮಾರ್) ಸುತ್ತ ಸುತ್ತುತ್ತದೆ. ರಾಮಸೇತುವಿನ ನಿಜವಾದ ಅಸ್ತಿತ್ವವನ್ನು ಸಾಬೀತುಪಡಿಸಲು ಕೆಟ್ಟ ಶಕ್ತಿಗಳ ವಿರುದ್ಧ ಅಕ್ಷಯ್‌ ಹೋರಾಡುವ ಥೀಮ್‌ ಟೀಸರ್‌ನಲ್ಲಿದೆ.ಚಿತ್ರವನ್ನು ಅರುಣಾ ಭಾಟಿಯಾ (ಕೇಪ್ ಆಫ್ ಗುಡ್ ಫಿಲ್ಮ್ಸ್), ವಿಕ್ರಮ್ ಮಲ್ಹೋತ್ರಾ (ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್), ಸುಬಾಸ್ಕರನ್, ಮಹಾವೀರ್ ಜೈನ್ ಮತ್ತು ಆಶಿಶ್ ಸಿಂಗ್ (ಲೈಕಾ ಪ್ರೊಡಕ್ಷನ್ಸ್) ಮತ್ತು ಪ್ರೈಮ್ ವಿಡಿಯೋ ನಿರ್ಮಿಸಿದ್ದಾರೆ ಮತ್ತು ಡಾ ಚಂದ್ರಪ್ರಕಾಶ್ ದ್ವಿವೇದಿ ಹಣ ಹಾಕಿದ್ದಾರೆ. ಜೀ ಸ್ಟುಡಿಯೋಸ್‌ನಿಂದ ಥಿಯೇಟರ್‌ಗಳಲ್ಲಿ ವಿಶ್ವದಾದ್ಯಂತ `ರಾಮ್ ಸೇತು’ ವಿತರಿಸಲಾಗುವುದು……