ಪಾರ್ಟ್ ಆಫ್ ಸ್ಪೈನ್:
ವೆಸ್ಟ್ ಇಂಡೀಸ್ ತಂಡದ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ. 35ರ ಹರೆಯದ ಬ್ರಾವೋ ತಮ್ಮ 14 ವರ್ಷಗಳ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಇನ್ನು ಜಾಗತಿಕ ಮಟ್ಟದಲ್ಲಿ ದೇಶೀಯ ಟಿ20 ಕ್ರಿಕೆಟ್ ಆಡಲು ಲಭ್ಯವಿರುವುದಾಗಿ ಖಚಿತಪಡಿಸಿದ್ದಾರೆ.
ವೆಸ್ಟ್ ಇಂಡೀಸ್ ಪರ ಬ್ರಾವೋ 40 ಟೆಸ್ಟ್, 164 ಏಕದಿನ ಹಾಗೂ 66 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ 40, ಏಕದಿನ ಕ್ರಿಕೆಟ್ ನಲ್ಲಿ 199 ಹಾಗೂ ಟಿ20 ಕ್ರಿಕೆಟ್ ನಲ್ಲಿ 52 ವಿಕೆಟ್ ಪಡೆದಿದ್ದಾರೆ.
ಆಲ್ರೌಂಡರ್ ಆಗಿರುವ ಬ್ರಾವೋ ಟೆಸ್ಟ್ ನಲ್ಲಿ 2200, ಏಕದಿನದಲ್ಲಿ 2968 ಹಾಗೂ ಟಿ20ಯಲ್ಲಿ 1142 ರನ್ ಗಳಿಸಿದ್ದಾರೆ. ಟೆಸ್ಟ್ ನಲ್ಲಿ 3 ಶತಕ ಹಾಗೂ 13 ಅರ್ಧಶತಕ, ಏಕದಿನದಲ್ಲಿ 2 ಶತಕ ಹಾಗೂ 10 ಅರ್ಧ ಶತಕ, ಟಿ20ಯಲ್ಲಿ 4 ಅರ್ಧ ಶತಕವನ್ನು ಸಿಡಿಸಿದ್ದಾರೆ……