Breaking News

ಕೇಂದ್ರದ ನೂತನ ಕೃಷಿ ಕಾಯ್ದೆ ವಿರೋಧಿಸಿ ಇನ್ನು ನಿಲ್ಲದ ರೈತರ ಪ್ರತಿಭಟನೆ..!

ನಾಳೆ ಕೇಂದ್ರ ಸರ್ಕಾರದ ಜೊತೆ 6ನೇ ಸುತ್ತಿನ ಮಾತುಕತೆ....

SHARE......LIKE......COMMENT......

ನವದೆಹಲಿ:

ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ರೈತರು ನಡೆಸ್ತಿರೋ ಪ್ರತಿಭಟನೆ ಇನ್ನೂ ಮುಗಿದಿಲ್ಲ. ಪ್ರತಿಭಟನಾನಿರತ ರೈತರು ನಾಳೆ ಕೇಂದ್ರ ಸರ್ಕಾರದ ಜೊತೆ 6ನೇ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಮಾತುಕತೆಗೆ ಬರುವಂತೆ ಪ್ರಧಾನಿ ಮಾಡಿದ ಮನವಿಯನ್ನು ಪರಿಗಣಿಸಿ, 40 ರೈತ ಸಂಘಟನೆಗಳ ಮುಖಂಡರು ನಾಳೆಗೆ ದಿನಾಂಕ ನಿಗದಿಪಡಿಸಿದ್ದಾರೆ. ತಮ್ಮ ಬೇಡಿಕೆಗಳು ಈಡೇರದೇ ಇದ್ರೆ ಜನವರಿ 1ರಿಂದ ಪ್ರತಿಭಟನೆಯನ್ನ ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗುವುದು ಅಂತಾ ರೈತರು ಎಚ್ಚರಿಕೆ ನೀಡಿದ್ದಾರೆ……