Breaking News

ಅಗ್ನಿಸಾಕ್ಷಿಯ ಗುಳಿಕೆನ್ನೆ ಚೆಲುವ ಸಿದ್ದಾರ್ಥ್ ಇನ್ಮುಂದೆ ಧಾರಾವಾಹಿಯಲ್ಲಿ ಇರುವುದಿಲ್ಲ..!

ಆಸ್ಟ್ರೇಲಿಯಾ ಹೋದವರು ವಾಪಸ್ ಬರೋದಿಲ್ಲ....

SHARE......LIKE......COMMENT......

ಸಿನಿಮಾ:

ಕಿರುತೆರೆಯ ಗುಳಿಕೆನ್ನೆ ಚೆಲುವ ಖಾಸಗಿ ವಾಹಿನಿಯ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಸಿದ್ಧಾರ್ಥ ಎಂಬ ಹೆಸರಿನಿಂದ ಖ್ಯಾತಿಯನ್ನು ಪಡೆದಿರುವ ವಿಜಯ ಸೂರ್ಯ ಇನ್ಮುಂದೆ ಧಾರಾವಾಹಿಯಲ್ಲಿ ಇರುವುದಿಲ್ಲವಂತೆ. ಹೀಗಂತ ನಟ ವಿಜಯ್ ಸೂರ್ಯ ಅವರು ಬಹಿರಂಗ ಪಡಿಸಿ ತನ್ನ ನೆಚ್ಚಿನ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಸಿದ್ದಾರ್ಥ್ ದಿಢೀರನೆ ಹೊರ ಬರಲು ಅಸಲಿ ಕಾರಣ ಅವರ ಪಾತ್ರ ಧಾರಾವಾಹಿನಿಯಲ್ಲಿ ಕೊನೆಯಾಗಿದೆಯಂತೆ. ಧಾರಾವಾಹಿಯಲ್ಲಿ ಸಿದ್ದಾರ್ಥ್ ಈಗಾಗಲೆ ಆಸ್ಟ್ರೇಲಿಯಾಗೆ ಹೋಗಲು ಸಿದ್ದರಾಗಿದ್ದು. ಸಿದ್ದಾರ್ಥ್ ಆಸ್ಟ್ರೇಲಿಯಾಗೆ ಹೊರಟ ನಂತರ ಅವರ ಪಾತ್ರ ಅಲ್ಲಿಗೆ ಕೊನೆಯಾಗಲಿದೆ.

ಅಗ್ನಿಸಾಕ್ಷಿ ಧಾರಾವಾಹಿ ಪ್ರಾರಂಭವಾಗಿ ಐದು ವರ್ಷಗಳು ಆಗಿವೆ. ಸಿದ್ದಾರ್ಥ್ ಐದು ವರ್ಷದ ಅಗ್ರಿಮೆಂಟ್ ಕೂಡ ಮುಕ್ತಾಯವಾಗಿದೆಯಂತೆ. ಅಲ್ಲದೆ ವಿಜಯ್ ಗೆ ಕೊಂಚ ಬ್ರೇಕ್ ಕೂಡ ಬೇಕಂತೆ. ಹಾಗಾಗಿ ಈ ಎಲ್ಲಾ ಕಾರಣಗಳಿಗೆ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ದಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರ ಕೂಡ ಮುಕ್ತಾಯವಾಗಿರುವುದರಿಂದ  ಅವರು ತಮ್ಮ ಅಗ್ನಿಸಾಕ್ಷಿ ಸೀರಿಯಲ್ ನಿಂದ ಹೊರಬರಲು ನಿರ್ಧರಿಸಿದ್ದು ಇನ್ಮುಂದೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ……