ಬಾಲಿವುಡ್:
ಸೋಷಿಯಲ್ ಮೀಡಿಯಾದಲ್ಲಿ ಎಲ್ಲೂ ನೋಡಿದರೂ ಬರೀ 10 YEARS ಚಾಲೆಂಜ್ ಗಳ ಹವಾ,ಸೆಲಬ್ರಿಟಿ, ಸಾಮಾನ್ಯರು ಈ ಚಾಲೆಂಜ್ನ ಭಾಗವಾಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ 10 ವರ್ಷಗಳ ಹಿಂದಿನ ಫೋಟೋ ವಿಡಿಯೋ ಶೇರ್ ಮಾಡುತ್ತಿದ್ದಾರೆ.
ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ 10ರ ಬದಲಿಗೆ 40 ವರ್ಷದ ಚಾಲೆಂಜ್ ಹಾಕಿದ್ದಾರೆ. ತಮ್ಮ ಚಿತ್ರಗಳ ನಾಲ್ಕು ಡ್ಯಾನ್ಸ್ ವಿಡಿಯೋ ಅವರು ಶೇರ್ ಮಾಡಿದ್ದಾರೆ.1989, 1999.2009 ಹಾಗೂ 2019 ಹೀಗೆ ನಾಲ್ಕು ದಶಕಗಳ ಈ ವಿಡಿಯೋದಲ್ಲಿ ಅವರ ಎನರ್ಜಿ ಎಳ್ಳಷ್ಟು ಕಡಿಮೆಯಾಗಿಲ್ಲ. ಅಂದು, ಇಂದು ಎಂದೆಂದಿಗೂ ನನ್ನಲ್ಲಿ ಇದೇ ಉತ್ಸಾಹ ಇರುತ್ತೆ ಎಂಬುದನ್ನು ಅವರು ಈ ಮೂಲಕ ಹೇಳಿದ್ದಾರೆ. ’10year challenge ಮರೆಯಿರಿ, ಅನಿಲ್ ಕಪೂರ್ AK ಚಾಲೆಂಜ್ ಸ್ವೀಕರಿಸಿ’ ಎಂದು ಟ್ವಿಟರ್ನಲ್ಲಿ ಸವಾಲೆಸೆದಿದ್ದಾರೆ.
Forget the #10YearChallenge, take the #AKChallenge! pic.twitter.com/uX9krPrwfn
— Anil Kapoor (@AnilKapoor) January 19, 2019