Breaking News

ಅಭಿನಂದನ್‍ ಬೆನ್ನೆಲುಬು ಹಾಗೂ ಪಕ್ಕೆಲುಬಿನಲ್ಲಿ ಗಾಯ ..!

ವಿಮಾನದಿಂದ ಕೆಳಗೆ ಹಾರುವ ಹೊತ್ತಲ್ಲಿ ಪೆಟ್ಟು....

SHARE......LIKE......COMMENT......

ನವದೆಹಲಿ:

ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಕ್ ಎಫ್-16 ವಿಮಾನವನ್ನು ಬೆನ್ನಟ್ಟಿ ಹೊಡೆದುರುಳಿಸಿದ ನಂತರ ಅವರ ವಿಮಾನ ಕೂಡ ಪತನವಾಗಿತ್ತು ಈ ವೇಳೆ ಪ್ಯಾರಾಚೂಟ್ ಮೂಲಕ ಜಿಗಿದ ವಿಂಗ್ ಕಮಾಂಡರ್ ಪಾಕ್ ನೆಲದಲ್ಲಿ ಬಿದ್ದಿದ್ದರು,ಅಲ್ಲಿನ ಸ್ಥಳೀಯರು ಅಭಿನಂದನ್ ಮೇಲೆ ಹಲ್ಲೆ ನಡೆಸಿದ ಕಾರಣ ಪಕ್ಕೆಲುಬಿಗೆ ಹಾಗೂ ಬೆನ್ನೆಲುಬು ಗಾಯವಾಗಿದೆ ಎಂದು ಊಹಿಸಲಾಗಿದೆ…

ದೆಹಲಿ ಕಂಟೋನ್ಮೆಂಟ್ ‍ನಲ್ಲಿರುವ ರಿಸರ್ಚ್ ಆ್ಯಂಡ್ ರೆಫರಲ್ ಆಸ್ಪತ್ರೆಯಲ್ಲಿ ಅಭಿನಂದನ್ ಅವರನ್ನು ಇನ್ನಷ್ಟು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಗೆ ಒಳಪಡಿಸಲಾಗುವುದು ಎಂದು ಮೂಲಗಳು ಹೇಳಿರುವುದಾಗಿ ಎಎನ್‍ಐ ಸುದ್ದಿ ಸಂಸ್ಥೆ ವರದಿ ಮಾಡಿದೆ……