Breaking News

ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಹಿಂದೂ ಮಹಿಳೆ..!

ಕಾಂಗ್ರೆಸ್​ನ ಮೊದಲ ಹಿಂದೂ ಸದಸ್ಯೆ....

SHARE......LIKE......COMMENT......

ವಾಷಿಂಗ್ಟನ್​:

ಮುಂಬರುವ 2020 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಡೆಮಾಕ್ರಟಿಕ್​ ಪಕ್ಷದಿಂದ ಹವಾಯಿಯ ಯುಎಸ್​ ಪ್ರತಿನಿಧಿಯಾಗಿರುವ ತುಳಸಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ  ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಂದಿನವಾರ ಔಪಚಾರಿಕವಾಗಿ ಹಾಗೂ ಅಧಿಕೃತವಾಗಿ ಘೋಷಿಸುವುದಾಗಿ ಗಬ್ಬಾರ್ಡ್​ ಅಮೆರಿಕ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.

ಗಬ್ಬಾರ್ಡ್​ ಇರಾಕ್​ ವಾರ್​ ಸಂದರ್ಭದಲ್ಲಿ ಅಮೆರಿಕವನ್ನ ಪ್ರತಿನಿಧಿಸಿ ಸೇವೆ ಸಲ್ಲಿಸಿದ್ದರು.  ಪ್ರಸ್ತುತ ಅವರು ಅಮೆರಿಕ ವಿದೇಶಾಂಗ ಇಲಾಖೆ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅಮೆರಿಕ ಕಾಂಗ್ರೆಸ್​ನ ಮೊದಲ ಹಿಂದೂ ಸದಸ್ಯೆಯಾಗಿರುವ ಗಬ್ಬಾರ್ಡ್​ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ……