Breaking News

ಅಯ್ಯಪ್ಪ ದೇಗುಲ ಪ್ರವೇಶಿಸಿದ್ದ ಮಹಿಳೆಗೆ ಬಹಿಷ್ಕಾರ..!

ದಿಕ್ಕು ತೋಚದ ಕನಕದುರ್ಗಾಗೆ ಸರಕಾರಿ ಆಶ್ರಯ ತಾಣ....

SHARE......LIKE......COMMENT......

ತಿರುವನಂತಪುರಂ: 

ಸಂಪ್ರದಾಯವನ್ನು ಮುರಿದು, ಭಕ್ತರ ವಿರೋಧದ ನಡುವೆಯೂ ಅಯ್ಯಪ್ಪ ದೇಗುಲ ಪ್ರವೇಶ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಇಬ್ಬರು ಮಹಿಳೆಯರ ಪೈಕಿ ಕನಕದುರ್ಗ ಅವರಿಗೆ ಕುಟುಂಬ ಸದಸ್ಯರು ಬಹಿಷ್ಕಾರ ಹಾಕಿದ್ದಾರೆ.ಅತ್ತೆಯಿಂದ ಹಲ್ಲೆಗೊಳಗಾಗಿ ಸುಮಾರು ಒಂದು ವಾರದಿಂದ ಕೊಯಿಕ್ಕೋಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಕದುರ್ಗಾ, ಮನೆಗೆ ಹಿಂದಿರುಗಿದಾಗ ಪತಿ ಹಾಗೂ ಭಾವಂದಿರು ಪ್ರವೇಶ ನಿರಾಕರಿಸಿದ್ದಾರೆ  ಇದರಿಂದ ದಿಕ್ಕು ತೋಚದ ಕನಕದುರ್ಗಾ ಪೊಲೀಸರ ನೆರವು ಯಾಚಿಸಿ, ಸರಕಾರಿ ಆಶ್ರಯ ತಾಣ ಸೇರಿದ್ದಾರೆ……