Breaking News

ಅರುಣ್​ ಜೇಟ್ಲಿ ಆರೋಗ್ಯದಲ್ಲಿ ಏರುಪೇರು..!

ಮೃದು ಅಂಗಾಂಶ ಕ್ಯಾನ್ಸರ್​​ ಗೆ ಅಮೆರಿಕದಲ್ಲಿ ಚಿಕಿತ್ಸೆ....

SHARE......LIKE......COMMENT......

ನವದೆಹಲಿ:

ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ ಅವರ ಆರೋಗ್ಯದಲ್ಲೂ ಏರುಪೇರು ಉಂಟಾಗಿದೆ. ಜೇಟ್ಲಿ ಅವರಿಗೆ ಮೃದು ಅಂಗಾಂಶ ಕ್ಯಾನ್ಸರ್​​ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗ್ತಿದೆ. ಸದ್ಯ ಜೇಟ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಹೀಗಾಗಿ ಫೆ.1ರಂದು ಜೇಟ್ಲಿ ಬಜೆಟ್ ಮಂಡನೆ ಮಾಡೋದು ಡೌಟ್ ಎಂದು ಹೇಳಲಾಗ್ತಿದೆ. ಮಾಂಸಖಂಡಗಳು, ಸ್ನಾಯು, ರಕ್ತನಾಳ ಹೀಗೆ ನಾನಾ ಭಾಗಕ್ಕೆ ಸೋಂಕು ಉಂಟಾಗಿದೆ ಎಂದು ಹೇಳಲಾಗಿದೆ…

ಕಳೆದ ವರ್ಷ ಏಪ್ರಿಲ್‌ನಲ್ಲಿ ಕಿಡ್ನಿ ಸಮಸ್ಯೆಯಿಂದ ಏಮ್ಸ್‌ಗೆ ದಾಖಲಾಗಿದ್ದರು 66 ವರ್ಷ ವಯಸ್ಸಿನ ಅರುಣ್‌ ಜೇಟ್ಲಿ ಮೇ ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆರೋಗ್ಯ ತಪಾಸಣೆಗಾಗಿ ಅವರು ಭಾನುವಾರ ರಾತ್ರಿ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಯಾವಾಗ ವಾಪಸ್‌ ಬರಲಿದ್ದಾರೆ ಎಂಬುದನ್ನು ಇನ್ನು ಬಹಿರಂಗಪಡಿಸಿಲ್ಲ…..