ಆಂಧ್ರ ಸ್ಟೈಲ್ ಎಗ್ ಕರಿಗೆ ಬೇಕಾಗುವ ಪದಾರ್ಥಗಳು:
*ಬೇಯಿಸಿದ ಮೊಟ್ಟೆ 3
*ಈರುಳ್ಳಿ 1
*ಬೆಳ್ಳುಳ್ಳಿ 5 -6 ತುಂಡು
*ಹಸಿ ಮೆಣಸಿನ ಕಾಯಿ 3-4
*ಟೊಮೇಟೊ 2
*ಅರಿಶಿಣ ಪುಡಿ 1 ಟೀ . ಚಮಚ
*ಖಾರದ ಪುಡಿ 2 ಟೀ. ಚಮಚ
*ಕೊತ್ತೊಂಬರಿ ಪುಡಿ 1 ಟೀ. ಚಮಚ
*ಹುಣಸೆ 1/2 ಕಪ್
*ಬೆಲ್ಲ 1 ಟೀ. ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಸಾಸಿವೆ 1 ಟೀ.ಚಮಚ
*ಜೀರಿಗೆ 1 ಟೀ. ಚಮಚ
*ಕರಿ ಬೇವು 1 ಕಟ್ಟು
*ಎಣ್ಣೆ 2 ಟೀ. ಚಮಚ
*ಕೊತ್ತಂಬರಿ ಸೊಪ್ಪು 2 ಟೀ. ಚಮಚ
ಆಂಧ್ರ ಸ್ಟೈಲ್ ಎಗ್ ಕರಿ ಮಾಡುವ ಸುಲಭ ವಿಧಾನಗಳು:
1. ಒಂದು ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಸಾಸಿವೆ ಬೀಜಗಳನ್ನು ,ಜೀರಿಗೆ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಕೆಲವು ಸೆಕೆಂಡ್‍ಗಳ ಕಾಲ ಉರಿಯಿರಿ.
2. ಇದಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಕತ್ತರಿಸಿದ ಈರುಳ್ಳಿಯನ್ನು ಹಾಕಿ 4-5 ನಿಮಿಷಗಳ ಕಾಲ ಉರಿಯಿರಿ.
3. ನಂತರ ಇದಕ್ಕೆ ಹಸಿ ಮೆಣಸು, ಅರಿಶಿಣ ಪುಡಿ, ಖಾರದ ಪುಡಿ ಮತ್ತು ಧನಿಯಾ ಪುಡಿಗಳನ್ನು ಹಾಕಿ. 2-3 ನಿಮಿಷಗಳ ಕಾಲ ಬೇಯಿಸಿ.
4. ನಂತರ ಇದಕ್ಕೆ ಕತ್ತರಿಸಿದ ಟೊಮೇಟೊ ಮತ್ತು ಹುಣಸೆಯನ್ನು ಹಾಕಿ. 3-4 ನಿಮಿಷಗಳ ಕಾಲ ಬೇಯಿಸಿ.
5. ಆಮೇಲೆ ಬೆಲ್ಲ ಮತ್ತು ಉಪ್ಪನ್ನು ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ, ಮತ್ತೆ 4ಧ-5 ನಿಮಿಷಗಳ ಕಾಲ ಬೇಯಿಸಿ.
6. ಈಗ ಇದಕ್ಕೆ ಬೇಯಿಸಿದ ಮೊಟ್ಟೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
7. ಇದೆಲ್ಲ ಮುಗಿದ ಮೇಲೆ, ಉರಿಯನ್ನು ಆರಿಸಿ. ಕರಿಯ ಮೇಲೆ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಆಂಧ್ರ ಸ್ಟೈಲ್ ಎಗ್ ಕರಿ ರೆಡಿ...