Breaking News

ಇಡಿ ವಿಚಾರಣೆಗೆ ಡಿಕೆಶಿ ತಾಯಿ ಗೈರು..!

ಬೆಂಗ್ಳೂರಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ....

SHARE......LIKE......COMMENT......

ಬೆಂಗಳೂರು:

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಡಿ.ಕೆ.ಶಿವಕುಮಾರ್ ತಾಯಿ ಹಾಗೂ ಪತ್ನಿಗೆ ಸಮನ್ಸ್ ನೀಡಿತ್ತು. ಆದರೆ ವಿಚಾರಣೆಗೆ ಅತ್ತೆ ಗೈರಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಅತ್ತೆ, ಸೊಸೆ ಮನವಿ ಮಾಡಿದ್ದಾರೆ.ಡಿ.ಕೆ.ಶಿವಕುಮಾರ್ ತಾಯಿ ಗೌರಮ್ಮ ಹಾಗೂ ಪತ್ನಿ ಉಷಾ ಇಡಿ ಅಧಿಕಾರಿಗಳಿಗೆ ಈ ಕುರಿತು ಮನವಿ ಮಾಡಿದ್ದು, ಅನಾರೋಗ್ಯದ ಹಿನ್ನೆಲೆ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಪತ್ರ ಬರೆದಿದ್ದಾರೆ. ಡಿ.ಕೆ.ಶಿವಕುಮಾರ್ ಪತ್ನಿಯಿಂದಲೂ ಇದೇ ರೀತಿ ಮನವಿ ಮಾಡಲಾಗಿದ್ದು, ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಅಕ್ಟೋಬರ್ 17ಕ್ಕೆ ವಿಚಾರಣೆಗೆ ಹಾಜರಾಗುವಂತೆ ಉಷಾ ಅವರಿಗೆ ಇಡಿ ಅಧಿಕಾರಿಗಳು ಸಮನ್ಸ್ ನೀಡಿದ್ದರು. ಇದೀಗ ಸಮನ್ಸ್ ಗೆ ಗೌರಮ್ಮ ಹಾಗೂ ಉಷಾ ಅವರು ಉತ್ತರಿಸಿದ್ದು, ಈ ಕುರಿತು ಇಡಿ ಅಧಿಕಾರಿಗಳು ಇನ್ನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಡಿಕೆ ಶಿವಕುಮಾರ್ ಅವರ ಕುಟುಂಬವನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಇಡಿ ಅಧಿಕಾರಿಗಳು ನಾಳೆಯೇ ವಿಚಾರಣೆ ಹಾಜರಾಗುವಂತೆ ಸೋಮವಾರ ತಾಯಿ ಗೌರಮ್ಮ ಅವರಿಗೆ ಸೂಚಿಸಿದ್ದರು. ಉಷಾ ಅವರಿಗೆ ನೀಡಲಾಗಿರುವ ನೋಟಿಸ್‍ನಲ್ಲಿ ಗುರುವಾರ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಕುಟುಂಬ ಸದಸ್ಯರ ನಡುವೆ ನಡೆದಿರುವ ಹಣದ ವ್ಯವಹಾರವೇ ಕಾರಣ ಎನ್ನಲಾಗಿದ್ದು, ತಾಯಿ-ಮಗನಿಗೆ, ಮಗ-ತಾಯಿಗೆ, ಪತಿ-ಪತ್ನಿಗೆ, ಮಾವನಿಂದ ಸೊಸೆಗೆ ಸಾಲದ ವ್ಯವಹಾರ ನಡೆದಿರುವ ಕುರಿತು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ……