Breaking News

100 ಹಾಸಿಗೆ ಆಸ್ಪತ್ರೆಯಲ್ಲಿ ಮೂವರೇ ವೈದ್ಯರು..!

ಆರೋಗ್ಯ ಸಚಿವರೇ ಉಸ್ತುವಾರಿ ಇದ್ರೂ ಸಿಕ್ಕಿಲ್ಲ ಪರಿಹಾರ....

SHARE......LIKE......COMMENT......

ಹುನಗುಂದ:

ತಾಲೂಕಿನ ಬಡರೋಗಿಗಳಿಗೆ ಆಸರೆ ಆಗಬೇಕಿರುವ ಹುನಗುಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿದೆ.  100 ಹಾಸಿಗೆಯ ದೊಡ್ಡ ಆಸ್ಪತ್ರೆಯಾಗಿದ್ದರೂ ಮೂವರು ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳು ನಿತ್ಯ ಪರದಾಡಿ, ಖಾಸಗಿ ಆಸ್ಪತ್ರೆಗಳತ್ತ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

ಸರ್ಕಾರವೇ ರೂಪಿಸಿರುವ ನಿಯಮಾನುಸಾರ ಈ ಆಸ್ಪತ್ರೆಯಲ್ಲಿ 12ರಿಂದ 15 ವಿವಿಧ ರು ಸೇವೆಯಲ್ಲಿರಬೇಕು. ಆದರೆ, ಹೆರಿಗೆ, ದಂತ, ಎಲಬು ಮತ್ತು ಕೀಲು ತಜ್ಞ ವೈದ್ಯರು ಬಿಟ್ಟರೆ ಬೇರೆ ವೈದ್ಯರಿಲ್ಲ. ಮುಖ್ಯವಾಗಿ ಮಕ್ಕಳ ತಜ್ಞ, ನೇತ್ರ ತಜ್ಞ, ಹೃದಯರೋಗ ಮತ್ತು ಮಧುಮೇಹ ತಜ್ಞರ ಅವಶ್ಯಕತೆ ಹೆಚ್ಚಿದ್ದು, ಈ ತಜ್ಞ ವೈದ್ಯರು ಇಲ್ಲ. ಇಂತಹ ದೊಡ್ಡ ಆಸ್ಪತ್ರೆಯಲ್ಲಿ ಒಬ್ಬ ಸರ್ಜನ್‌ ಡಾಕ್ಟರ್‌ ಮತ್ತು ಚೀಫ್‌ ಮೆಡಿಕಲ್‌ ಆಫೀಸರ್‌ ಕೂಡ ಲಭ್ಯವಿಲ್ಲದಿರುವುದು ದುರಂತ. ಪಕ್ಕದಲ್ಲಿಯೇ ರಾಷ್ಟ್ರೀಯ ಹೆದ್ದಾರಿ 50 ಇದ್ದು ಆಗಾಗ ಅಪಘಾತ ಸಂಭವಿಸಿ ತಾಲೂಕು ಆಸ್ಪತ್ರೆಗೆ ದಾಖಲಾದರೆ ಅವರಿಗೆ ತುರ್ತು ಚಿಕಿತ್ಸೆ ನೀಡಲು ತುರ್ತು ನಿಗಾ ಘಟಕವಿದ್ದರೂ ದಿನದ 24 ಗಂಟೆ ಕಾಲ ಚಿಕಿತ್ಸೆ ನೀಡುವ ವೈದ್ಯರಿಲ್ಲ.

ಕೆಲವೊಂದು ಸೌಲಭ್ಯ ಮತ್ತು ವಿಶೇಷವಾಗಿ ತಾಲೂಕು ವೈದ್ಯಾಧಿಕಾರಿಗಳನ್ನು ಭೇಟಿಯಾಗಲು ಬಂದರೆ ಆಸ್ಪತ್ರೆಯಲ್ಲಿ ಅವರೂ ಇರವುದಿಲ್ಲ. ಬರಿಮೀಟಿಂಗ್‌ ಹೋಗಿದ್ದಾರೆ ಎಂಬ ಪದ ನಿತ್ಯ ಕೇಳುವ ಪರಿಸ್ಥಿತಿ ಇದೆ. ಆರೋಗ್ಯ ಸಚಿವರೇ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ. ಉಸ್ತುವಾರಿ ಸಚಿವರ ತವರಲ್ಲೇ 100 ಹಾಸಿಗೆ ತಾಲೂಕು ಆಸ್ಪತ್ರೆಯ ಪರಿಸ್ಥಿತಿ ಹೀಗಾದರೆ, ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಿತಿ ಅಯೋಮಯ ಎನ್ನುವಂತಾಗಿದೆ……