Breaking News

ಇಸೂಜು ಕಾರ್‌ ಮಾರ್ಕೆಟ್ ಗೆ ಎಂಟ್ರಿ..!

ಎಸ್‌ಯುವಿ ವಾಹನಗಳಿಗೆ ಕಾಂಪಿಟೇಷನ್ ರೆಡಿ....

SHARE......LIKE......COMMENT......

ಆಟೋ ವರ್ಲ್ಡ್:

ಇಸೂಜು ಕಂಪನಿಯು ಈಗ ಎಂಯು-ಎಕ್ಸ್‌ ಸಿಗ್ನೇಚರ್‌ನ ಎಸ್‌ಯುವಿ ಶ್ರೇಣಿಯ ಹೊಸ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ತನ್ನದೇ ಸ್ಟೈಲ್‌ ಮತ್ತು ವಿನ್ಯಾಸಗಳೊಂದಿಗೆ ಹಲವು ವೈಶಿಷ್ಟ್ಯ  ಹೊಂದಿರುವ ಕಾರು ಮಾರುಕಟ್ಟೆಯ ಹೊಸ ಆಕರ್ಷಣೆಯಾಗಿದೆ ಹೊರಾಂಗಣ ಮತ್ತು ಒಳಾಂಗಣದಲ್ಲಿ ಹೆಚ್ಚು ವೈಶಿಷ್ಟಗಳನ್ನು ಒಳಗೊಂಡಿರುವ ಈ ವಾಹನದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಅದರಂತೆ 6 ಏರ್‌ಬ್ಯಾಗ್‌ಗಳು ಮತ್ತು ಹಿಲ್‌ ಡೀಸೆಂಟ್‌ ಕಂಟ್ರೋಲ್‌  ಹೊಂದಿರುವುದು ವಿಶೇಷ. ಹೆಚ್ಚು ಸ್ಥಳಾವಕಾಶ ನೀಡಿರುವುದರಿಂದ ಇಡೀ ಕುಟುಂಬ ಆರಾಮದಾಯಕವಾಗಿ ಪ್ರಯಾಣ ಬೆಳಸಬಹುದಾಗಿದೆ.

ಎಂಯು ಕಾರು ಇತರೆ ಎಸ್‌ಯುವಿ ಸೆಗ್ಮೆಂಟ್‌ನ ಮಾದರಿಗಿಂತಲೂ ಬೇರೆಯದೇ ಆದ ಔಟ್‌ಲುಕ್‌ ಹೊಂದಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಗರುಡ ಮಾದರಿಯ ವಿನ್ಯಾಸವಿರುವುದರಿಂದ ನ್ಪೋರ್ಟ್ಸ್ ಕಾರುಗಳಂತೆ ಅತ್ಯಾಕರ್ಷಕವಾಗಿ ಕಾಣುತ್ತದೆ. ಇನ್ನು ವಿನ್ಯಾಸಕ್ಕೆ ಕಟ್ಟುಬಿದ್ದು, ಕಾರಿನ ಉದ್ದವನ್ನು ನಾಲ್ಕು ಮೀಟರ್‌ ಮೀರದಂತೆ ವಿನ್ಯಾಸಗೊಳಿಸಲಾಗಿದ್ದು, 230 ಎಂ.ಎಂ ಗ್ರೌಂಡ್‌ ಕ್ಲಿಯರೆನ್ಸ್‌ ಹೊಂದಿರುವುದು ಕಾರಿನ ವಿಶೇಷ…

ಕಾರ್‌ನ ಒಳಾಂಗಣ ವಿನ್ಯಾಸ ಪ್ರಯಾಣಿಕರಿಗೆ ಹೆಚ್ಚು ಖುಷಿ ನೀಡಲಿದೆ. ಕ್ವಿಲ್ಟ್-ಪ್ಯಾಟರ್ನ್ನ ಲೆದರ್‌ ಸೀಟುಗಳು, ಸಾಫ್ಟ್-ಟಚ್‌ ಪೆನಲ್‌ಗ‌ಳೊಂದಿಗೆ ಪ್ರೀಮಿಯಂ ಫಿನಿಶ್‌ನ ಆಕರ್ಷಕ ಡ್ಯಾಶ್‌ಬೋರ್ಡ್‌, ಬ್ರೆ„ಟ್‌ ಸಿಲ್ವರ್‌-ಫಿನಿಶ್‌ ಸೆಂಟರ್‌ ಕ್ಲಸ್ಟರ್‌ ಮತ್ತು ಕ್ರೋಮ್‌ ಫಿನಿಶ್‌ ವೆಂಟ್‌ ನಾಬ್‌ಗಳು ವಾಹನದ ಅಂದವನ್ನು ಹೆಚ್ಚಿಸಿವೆ. ಲಾವಾ ಬ್ಲ್ಯಾಕ್‌ ಪ್ರೀಮಿಯಂ ಇಂಟೀರಿಯರ್‌ಗಳನ್ನು ಹೊಂದಿದ್ದು, 7 ಮಂದಿ ಪ್ರಯಾಣಿಕರು ಪ್ರಯಾಣಿಸಲು ಸಾಕಾಗುವಷ್ಟು ಜಾಗ ಹೊಂದಿರುವ ಈ ಎಸ್‌ಯುವಿ, ಭಾರತದ ಫ‌ುಲ್‌ಸೈಜ್‌, ಪ್ರೀಮಿಯಂ ಎಸ್‌ಯುವಿ ಆಗಿದೆ.

3.0 ಲೀಟರ್‌ ಇಂಜಿನ್‌ ಸಾಮರ್ಥ್ಯ ಹೊಂದಿರುವ ಈ ಕಾರು 4ಜೆಜೆ1 ಡೀಸೆಲ್‌ ಎಂಜಿನ್‌ ಅನ್ನು ಒಳಗೊಂಡಿದೆ. ಇದು 177 ಪಿಎಸ್‌, ಗರಿಷ್ಠ ಮಟ್ಟದ ಅಂದರೆ 390 ಎನ್‌ಎಂ ಟಾರ್ಕ್‌ ಅನ್ನು ನೀಡಲಿದೆ. ಎಂಥಹುದೇ ಘಟ್ಟ ಪ್ರದೇಶಗಳಲ್ಲೂ ಸಲೀಸಾಗಿ ಮುನ್ನುಗ್ಗಬಲ್ಲದು.ಇದರಲ್ಲಿ 5-ಸ್ಪೀಡ್‌ ಸೀಕ್ವೆನ್ಷಿಯಲ್‌ ಶಿಫ್ಟ್ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಇದೆ. ಶಿಫ್ಟ್-ಆನ್‌-ದಿ-ಫ್ಲೈ ಇರಲಿದ್ದು, ಆಫ್-ರೋಡಿಂಗ್‌ ಸಾಮರ್ಥ್ಯವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಲವಾರು ವೈಶಿಷ್ಟ್ಯಗಳೊಂದಿಗೆ ಸಂಪೂರ್ಣವಾದ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ………