Breaking News

ನಗರಸಭೆಗೆ ಮಾತ್ರ ಉಪಾಹಾರ ಮೊತ್ತ ಏರಿಕೆ ಅಧಿಕಾರ ..!

ಪೌರ ಕಾರ್ವಿುಕರಿಗೆ ಸ್ಪಂದಿಸಿದ ಆಯೋಗದ ಸದಸ್ಯ....

SHARE......LIKE......COMMENT......

ಚಿಕ್ಕಮಗಳೂರು:

ಬೆಳಗ್ಗಿನ ವೇಳೆ ಕೇವಲ 20 ರೂ.ಗಳ 200 ಗ್ರಾಂ ಉಪಾಹಾರ ಒದಗಿಸಲಾಗುತ್ತಿದ್ದು, ಕನಿಷ್ಠ ಅದನ್ನು 30 ರೂ.ನ ತಿಂಡಿಗೆ ಏರಿಸಬೇಕೆಂಬ ಪೌರ ಕಾರ್ವಿುಕರ ಬೇಡಿಕೆಗೆ ಸ್ಪಂದಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹಿರೇಮನಿ, ಈ ಬಗ್ಗೆ ನಗರಸಭೆಯೇ ತೀರ್ಮಾನ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.

ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪೌರ ಕಾರ್ವಿುಕರ ಜತೆ ಸಂವಾದ ನಡೆಸಿದ ಅವರು, ಇದಕ್ಕೆ ಸರ್ಕಾರದ ಸೂಚನೆ ಅಥವಾ ಅನುಮತಿಯ ಅಗತ್ಯವಿಲ್ಲ. ಈ ಕ್ರಮ ಅನುಸರಿಸಿದಲ್ಲಿ ದೇಶದ ಇತರ ಕಡೆಗಳಿಗೆ ಈ ನಗರಸಭೆ ನಿದರ್ಶನವಾಗಬಹುದು. ಪರಿಶೀಲಿಸಿ ನಿರ್ಧಾರ ಕೈಗೊಳ್ಳುವಂತೆ ಆಯುಕ್ತರು ಹಾಗೂ ಅಧ್ಯಕ್ಷರಿಗೆ ಸೂಚನೆ ನೀಡಿದರು.

ನಗರದ ಶಂಕರಪುರದಲ್ಲಿ 50-60 ವರ್ಷದಿಂದ ವಸತಿಗೃಹಗಳ ನಿವಾಸಿಗಳಿಗೆ ಅವುಗಳನ್ನು ಕಾಯಂ ಮಾಡಿಕೊಡಬೇಕೆಂಬ ಬೇಡಿಕೆಗೆ ಉತ್ತರಿಸಿದ ಅವರು, ಇದು ರಾಜ್ಯವ್ಯಾಪಿ ಸಮಸ್ಯೆಯಾಗಿದ್ದು, ಈ ರೀತಿಯ ಗೃಹಗಳನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರಕ್ಕೆ ಅವರ ಹೆಸರಿಗೆ ಮಾಡಿಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ನಗರಸಭೆಯಲ್ಲಿ ಎಂಟು ಮಂದಿ ಪೌರಕಾರ್ವಿುಕರನ್ನು ಕಾಯಂ ಮಾಡದೆ ಕೆಲಸದಿಂದ ತೆಗೆದು ಹಾಕಲಾಗಿದೆ. 99 ಮಂದಿ ದಿನಗೂಲಿಯಲ್ಲಿ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಿಲ್ಲ ಎಂದು ದಸಂಸ ಮುಖಂಡ ಕುಮಾರ್ ಒತ್ತಾಯಿಸಿದಾಗ, ಈ ಬಗ್ಗೆ ರ್ಚಚಿಸಲಾಗುವುದು ಎಂದು ಆಯುಕ್ತೆ ತುಷಾರಮಣಿ ತಿಳಿಸಿದರು.ನಗರಸಭಾಧ್ಯಕ್ಷೆ ಶಿಲ್ಪಾ ರಾಜಶೇಖರ್, ಉಪಾಧ್ಯಕ್ಷ ಸಾಧೀರ್, ಯೋಜನಾಧಿಕಾರಿ ಮಲ್ಲಿಕಾರ್ಜುನ್ ಸಭೆಯಲ್ಲಿದ್ದರು…..