ಧಾರವಾಡ:
ಎರಡನೇ ಮದ್ವೆ ಆಗಿದ್ದಕ್ಕೆ ರೊಚ್ಚಿಗೆದ್ದ ಮೊದಲ ಹೆಂಡ್ತಿ, ತನ್ನ ಪತಿ ಹಾಗೂ ಎರಡನೇ ಹೆಂಡ್ತಿಗೆ ಹಿಗ್ಗಾಮುಗ್ಗಾ ಥಳಿಸಿರೋ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಬಸವನಗರ ನಿವಾಸಿ ಅಲ್ಲಾವುದ್ದೀನ ಬಳೆಗಾರ ಕಳೆದ 5 ವರ್ಷಗಳ ಹಿಂದೆ ಮದುವೆಯಾಗಿದ್ದ. ಆದರೆ ಇವರಿಬ್ಬರ ನಡುವೆ ಕೌಟುಂಬಿಕ ವಿಚಾರಕ್ಕೆ ಸಂಸಾರ ಚೆನ್ನಾಗಿ ನಡೆಯದ ಕಾರಣ, ಇಬ್ಬರು ಬೇರೆಯಾಗಿದ್ದರು.
ಕಳೆದ ಒಂದು ವಾರದ ಹಿಂದೆ ಅಲ್ಲಾವುದ್ದೀನ, ಎರಡನೇ ಮದುವೆ ಮಾಡಿಕೊಂಡಿದ್ದ. ಇದನ್ನು ತಿಳಿದ ಮೊದಲ ಪತ್ನಿ ತನ್ನ ಕುಟುಂಬದವರನ್ನು ಕರೆ ತಂದು ಪತಿ ಅಲ್ಲಾವುದ್ದೀನ ಹಾಗೂ ಎರಡನೇ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ದೃಶ್ಯ ಅಲ್ಲಾವುದ್ದೀನ ನಡೆಸುತ್ತಿರುವ ಕಂಪ್ಯೂಟರ್ ಕ್ಲಾಸಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನನಗೆ ಜೀವ ಭಯವಿದೆ ಎಂದು ಅಲ್ಲಾವುದ್ದೀನ್ ಹೇಳಿಕೊಂಡಿದ್ದಾನೆ……