ನವದೆಹಲಿ:
ಚಂದ್ರನ ಅಂಗಳಕ್ಕೆ ಚಂದ್ರಯಾನ–1 ಬಾಹ್ಯಾಕಾಶ ನೌಕೆ ಕಳುಹಿಸಿ ಐತಿಹಾಸಿಕ ಸಾಧನೆ ಮಾಡಿದ್ದ ಇಸ್ರೋ ಮತ್ತೊಂದು ದಾಖಲೆ ನಿರ್ಮಿಸಲು ಸಜ್ಜಾಗಿದೆ. ಚಂದ್ರನ ಅಂಗಳದಲ್ಲಿ ವೈಜ್ಞಾನಿಕ ಅಧ್ಯಯನಕ್ಕಾಗಿ ಚಂದ್ರಯಾನ–2 ಬಾಹ್ಯಾಕಾಶ ನೌಕೆಯ ಉಡಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಜುಲೈ 9 ರಿಂದ ಜುಲೈ 16ರೊಳಗೆ ಬಾಹ್ಯಾಕಾಶ ನೌಕೆ ಉಡಾವಣೆಯಾಗಲಿದೆ. ಸೆಪ್ಟೆಂಬರ್ 6ಕ್ಕೆ ನೌಕೆ ಲ್ಯಾಂಡ್ ಆಗಲಿದೆ. ದಕ್ಷಿಣ ಧ್ರುವದ ಸಮೀಪ ಬಾಹ್ಯಾಕಾಶ ನೌಕೆಯು ರೋವರ್ ಅನ್ನು ಹೊತ್ತ ಲ್ಯಾಂಡರ್ ನೆಲ ಸ್ಪರ್ಶ ಮಾಡಿದ ಬಳಿಕ ಕಲ್ಲು, ಮಣ್ಣು ಸಂಗ್ರಹಿಸಿ ವೈಜ್ಞಾನಿಕ ಪ್ರಯೋಗ ನಡೆಸಲಿದೆ. ಈ ಹಿಂದೆ ಚಂದ್ರಯಾನ–1ರಲ್ಲಿ ಚಂದ್ರನ ಕಕ್ಷೆಯಲ್ಲಿ ವೀಕ್ಷಣಾ ಉಪಗ್ರಹವು ಪರಿಭ್ರಮಣ ನಡೆಸಿ, ವೈಜ್ಞಾನಿಕ ಅಧ್ಯಯನ ನಡೆಸಿತ್ತು. ಅಲ್ದೇ ನೀರು ಇರೋ ಮಹತ್ವದ ಅಂಶವನ್ನೂ ಪತ್ತೆ ಮಾಡಿತ್ತು……