Breaking News

ಕಟೌಟ್, ಬ್ಯಾನರ್ ಗೆ ಹಾಲಿನ ಅಭಿಷೇಕ ಮಾಡಿ..!

ನಟ ಸಿಂಬು ವಿರುದ್ಧ ಹಾಲು ವಿತರಕರು ದೂರು.....

SHARE......LIKE......COMMENT......

ಕಾಲಿವುಡ್/ಚೆನ್ನೈ: 

ಟಾಲಿವುಡ್ ನ ಸೂಪರ್ ಸ್ಟಾರ್ ಸಿಂಬು ತಮ್ಮ ಚಿತ್ರ ‘ವಂತ ರಜವತನ್ ವರುವೇನು’ ಬಿಡುಗಡೆಯಾದ ದಿನ ಬ್ಯಾನರ್, ಕಟೌಟ್ ಮೇಲೆ ಹಾಲಿನ ಅಭಿಷೇಕ ಮಾಡಿ ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ. ಇದರ ಹಿನ್ನಲೆ ಸಿಂಬು ವಿರುದ್ಧ ತಮಿಳು ನಾಡು ಹಾಲು ಒಕ್ಕೂಟ ಪದಾಧಿಕಾರಿಗಳ ಸಂಘಟನೆ ಚೆನ್ನೈ ಪೊಲೀಸ್ ಆಯುಕ್ತ ಕಚೇರಿಯಲ್ಲಿ ದೂರು ನೀಡಿದೆ. ಅಲ್ಲದೆ ಫೆಬ್ರವರಿ 1ರಂದು ಸಿನಿಮಾ ಬಿಡುಗಡೆ ದಿನ ಹಾಲು ವಿತರಕರಿಗೆ ರಕ್ಷಣೆ ನೀಡಬೇಕೆಂದು ಕೋರಿದೆ ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ನಟ ಸಿಂಬು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒಕ್ಕೂಟ ಒತ್ತಾಯಿಸಿದೆ…..