Breaking News

ಕಮಾಂಡರ್ ಅಭಿನಂದನ್ ಮುಂದಿನ ಹೆಜ್ಜೆ ಏನು..!?

ಕರ್ತವ್ಯಕ್ಕೆ ಮರು ನಿಯೋಜನೆ ಬಗ್ಗೆ ಇಂದು ನಿರ್ಧಾರ......

SHARE......LIKE......COMMENT......

ಬೆಂಗಳೂರು:

ಪಾಕಿಸ್ತಾನದಿಂದ ಮರಳಿದ ವೀರಪುತ್ರ ಅಭಿನಂದನ್​​ಗೆ ತಡರಾತ್ರಿ ಒಂದು ಹಂತದ ವೈದ್ಯಕೀಯ ಪರೀಕ್ಷೆ ನಡೆದಿದ್ದು ಇಂದು ಮತ್ತೊಂದು ಸುತ್ತಿನ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಇಡೀ ರಾತ್ರಿ ವಾಯುಪಡೆ ಅಧಿಕಾರಿಗಳ ಸುಪರ್ದಿಯಲ್ಲಿದ್ದ ಅಭಿನಂದನ್​ರನ್ನು ವಾಯುಪಡೆ ಕಮಿಟಿಯಿಂದ ಪ್ರಾಥಮಿಕ ಹಂತದ ವಿಚಾರಣೆ ನಡೆಯಲಿದೆ.

ವಿಚಾರಣೆಗೂ ಮುನ್ನ ದೈಹಿಕ-ಮಾನಸಿಕ ಪರೀಕ್ಷೆ ಆಗಲಿವೆ. RAW, IB(ಗುಪ್ತಚರ), ವಿದೇಶಾಂಗ ಇಲಾಖೆ ಅಧಿಕಾರಿಗಳಿಂದ ವಿಚಾರಣೆ ನಡೆಯುವ ಸಾಧ್ಯತೆ ಇದ್ದು. ವಿಚಾರಣೆ ನಡೆಸಿದ ಪಾಕ್ ಅಧಿಕಾರಿಗಳು ಯಾರು..?, ಏನು ಪ್ರಶ್ನೆ ಕೇಳಿದರು..? ಪಾಕ್ ಪ್ರಶ್ನೆಗೆ ತಾವು ಕೊಟ್ಟ ಉತ್ತರ ಏನು..? ಎಂದು ಅಭಿನಂದನ್​ರನ್ನುನಮ್ಮ ಅಧಿಕಾರಿಗಳು ಪ್ರಶ್ನೆ ಮಾಡಲಿದ್ದಾರೆ. ಇದೆಲ್ಲಾ ಆದ್ಮೇಲೆ ವಾಯುಪಡೆ ಕರ್ತವ್ಯಕ್ಕೆ ಅಭಿನಂದನ್​ರನ್ನು ಮರು ನಿಯೋಜನೆ ಮಾಡಿಕೊಳ್ಳೋ ಬಗ್ಗೆ ನಿರ್ಧಾರ ಆಗಲಿದೆ……