Breaking News

ಲಾಕ್ ಡೌನ್ 4.O ಮದುವೆ ಸಮಾರಂಭಗಳಿಗೆ ಷರತ್ತುಬದ್ಧ ಸಮ್ಮತಿ…!

ಗರಿಷ್ಠ 50 ಮಂದಿ ಸೇರಲು ಮಾತ್ರ ಅವಕಾಶ...!

SHARE......LIKE......COMMENT......

ಬೆಂಗಳೂರು:

ಮದುವೆ ಹಾಗೂ ಕೆಲವು ವಿಶೇಷ ಕಾರ್ಯಕ್ರಮಗಳಿಗೆ ನಿಬಂಧನೆ ವಿಧಿಸಿ ಆರೋಗ್ಯ ಇಲಾಖೆ ಅವಕಾಶ ನೀಡಿದೆ. ಈ ಸಂಬಂಧ 17 ಅಂಶಗಳ ಮಾರ್ಗಸೂಚಿ ರಿಲೀಸ್ ಆಗಿದೆ. ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದು ಮದುವೆ ಹಾಗೂ ನಾಮಕರಣದಂತಹ ಕಾರ್ಯಕ್ರಮ ನಡೆಸಬಹುದು. ನಿರ್ಬಂಧದ ನಿಯಮ ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮಕೈಗೊಳ್ಳೋದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.

ಮದುವೆ ಸಮಾರಂಭಗಳಿಗೆ ಷರತ್ತುಬದ್ಧ ಸಮ್ಮತಿ…

*ಗರಿಷ್ಠ 50 ಮಂದಿ ಸೇರಲು ಮಾತ್ರ ಅವಕಾಶ
-ಸಹಜ ಗಾಳಿ ಹಾಗೂ ಬೆಳಕು ಇರುವ ಕಡೆ ಕಾರ್ಯಕ್ರಮ
*ಹವಾನಿಯಂತ್ರಣ ಯಂತ್ರ(ಎ.ಸಿ) ಬಳಕೆ ಮಾಡಕೂಡದು
*ಕಂಟೈನ್‌ಮೆಂಟ್ ವಲಯದಿಂದ ಬರುವವರಿಗೆ ಅವಕಾಶ ಇಲ್ಲ
*ಗರ್ಭಿಣಿ, ಮಕ್ಕಳು, 65 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಅವಕಾಶ ಇಲ್ಲ
*ಶೀತ, ಜ್ವರ, ಕೆಮ್ಮು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಬೇಕು
*ಪ್ರತಿಯೊಬ್ಬರಿಗೂ ಮಾಸ್ಕ್​​​ ಕಡ್ಡಾಯ, ಸೋಷಿಯಲ್​ ಡಿಸ್ಟೆನ್ಸ್ ಇರಬೇಕು
*ಕೈಗಳನ್ನು ಸ್ವಚ್ಛಪಡಿಸಿಕೊಳ್ಳಲು ಸ್ಯಾನಿಟೈಸರ್ ಹಾಗೂ ಸೋಪು ಇಡಬೇಕು
*ತಂಬಾಕು ಉತ್ಪನ್ನ ಬಳಸುವಂತಿಲ್ಲ, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು
*ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ
*ವಿವಾಹ ಅಥವಾ ಕಾರ್ಯಕ್ರಮಕ್ಕೆ ನೋಡಲ್ ವ್ಯಕ್ತಿ ನೇಮಿಸಬೇಕು
*ಅತಿಥಿಗಳ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಒದಗಿಸಬೇಕು
*ಎಲ್ಲರೂ ‘ಆರೋಗ್ಯ ಸೇತು’ ಮೊಬೈಲ್‌ ಆ್ಯಪ್‌ ಇನ್‌ಸ್ಟಾಲ್ ಮಾಡಿರಬೇಕು