Breaking News

ಮಲೆ ಮಹದೇಶ್ವರ ಮಾದಪ್ಪನ ಕಾಣಿಕೆ ವರ್ಷದಿಂದ ವರ್ಷಕ್ಕೆ ದಾಖಲೆ..!

ಈ ಬಾರಿ 32 ಲಕ್ಷ ರೂಪಾಯಿ ಹೆಚ್ಚಳ....

SHARE......LIKE......COMMENT......

ಚಾಮರಾಜನಗರ:

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಕಾಣಿಕೆ ಸಂಗ್ರಹ ವರ್ಷದಿಂದ ವರ್ಷಕ್ಕೆ ದಾಖಲೆ ಬರೆಯುತ್ತಲೇ ಇದೆ. ಮಲೆ ಮಹದೇಶ್ವರನಿಗೆ ಕಳೆದ 28 ದಿನಗಳಲ್ಲಿ ಬರೋಬ್ಬರಿ 1 ಕೋಟಿ 71 ಲಕ್ಷ ಹರಿದು ಬಂದಿದೆ. ಬೆಟ್ಟದ ಬಸ್​​ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯ ನಡೀತು. 72 ಗ್ರಾಂ ಚಿನ್ನ, 1 ಕೆಜಿ 400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1 ಕೋಟಿ 39 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಈ ಬಾರಿ 32 ಲಕ್ಷ ರೂಪಾಯಿ ಹೆಚ್ಚಳವಾಗಿದೆ……