Breaking News

ದೆಹಲಿಯ ವಿಮಾನ ಪ್ರಯಾಣ ದುಬಾರಿ..!

ದರ ಏರಿಕೆಗೆ ವಾಯುಮಾಲಿನ್ಯವೇ ಕಾರಣ....

SHARE......LIKE......COMMENT......

ಮುಂಬೈ:

ದೆಹಲಿ ವಾಯುಮಾಲಿನ್ಯ ತೀವ್ರತೆ ದೇಶದ ವಾಯು ಸಾರಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ರಾಜಧಾನಿಯಿಂದ ಇತರ ನಗರಗಳಿಗೆ ಪ್ರಯಾಣ ಬೆಳೆಸುವ ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ.ಕೆಲಸ ಕಾರ್ಯಗಳ ನಿಮಿತ್ತ, ಬಿಜಿನೆಸ್‌ ಟ್ರಿಪ್‌ಗ್ಳಿಗೆಂದು ಈಗಾಗಲೇ ಮುಂಗಡ ಟಿಕೆಟ್‌ ಬುಕ್‌ ಮಾಡಿಕೊಂಡವರು ಕಾಯ್ದಿರಿಸುವಿಕೆಯನ್ನು ಹಿಂಪಡೆದುಕೊಳ್ಳುತ್ತಿದ್ದು, ಅರ್ಧದಷ್ಟು ಜನರು ತಮ್ಮ ಪ್ರಯಾಣವನ್ನು ಮುಂದೂಡುತ್ತಿದ್ದಾರೆ.

ಇತರ ರಾಜ್ಯಗಳಿಗೆ ಹಾರಾಡುವ ದೇಶೀಯ ವಿಮಾನಗಳಲ್ಲಿ ಉಳ್ಳವರು, ಶ್ರೀಮಂತರು ಮಾತ್ರ ಹಾರಾಟ ಮಾಡಬಹುದೆಂಬ ಪರಿಸ್ಥಿತಿ ಪುನ: ನಿರ್ಮಾಣವಾಗಿದ್ದು, ಸಾಮಾನ್ಯ ಜನರು ಟಿಕೆಟ್‌ ದರವನ್ನು ಕೇಳಿ ಕಂಗಾಲಗಿದ್ದಾರೆ. ದರ ಏರಿಕೆಗೆ ರಾಜಧಾನಿಯ ವಾಯುಮಾಲಿನ್ಯವೇ ಪ್ರಮುಖ ಕಾರಣವಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುವುದರೊಂದಿಗೆ ಈ ಬೆಳವಣಿಗೆಯಿಂದ ಆರ್ಥಿಕತೆ ಚಟುವಟಿಕೆಗಳು ಕುಂಟಿತವಾಗುತ್ತಿದೆ…..