ಹೈದರಾಬಾದ್:
ಇಂದು ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿದ ಮೋದಿ ತೆಲುಗು ದೇಶಂ ಪಾರ್ಟಿ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದಾರೆ,ಗುಂಟೂರ್ ಮತ್ತು ವಿಜಯವಾಡಾದಲ್ಲಿ GO BACK MODI ಎಂಬ ಫಲಕ ಕಾಣಿಸಿಕೊಂಡಿತ್ತು.
ಈ ಬಗ್ಗೆ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ, “ಆಂಧ್ರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ ಟೀಚರ್ ಏನಾದರೊಂದು ವಿಷಯಕ್ಕೆ ಕರೆದು ಆಮೇಲೆ GO BACK ಅಂತಿದ್ದರು. ಅಂದರೆ ನಿಮ್ಮ ಜಾಗದಲ್ಲಿ ಹೋಗಿ ಕುಳಿತುಕೊಳ್ಳಿ. ಹೀಗೆ ಹೇಳುತ್ತಿದ್ದರಲ್ಲವೇನಾನು ತೆಲುಗು ದೇಶಂ ಪಕ್ಷಕ್ಕೆ ಋಣಿಯಾಗಿದ್ದೇನೆ ಅವರು ನನ್ನಲ್ಲಿ ಹೇಳಿದ್ದಾರೆ GO BACK ಅಂದರೆ ದೆಹಲಿಗೆ ಹೋಗಿ ಮತ್ತೆ ಅಧಿಕಾರ ಮುಂದುವರಿಸಿ. ನನಗೆ ದೇಶದ ಕೋಟಿಗಟ್ಟಲೆ ಜನರ ಮೇಲೆ ನಂಬಿಕೆ ಇದೆ. ಅವರು ತೆಲುಗು ದೇಶಂ ಪಕ್ಷದ ಆಸೆಯನ್ನು ಈಡೇರಿಸಿ ನನ್ನನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುತ್ತಾರೆ” ಎಂದು ಟಿಡಿಪಿ ಮೇಲೆ ವಾಗ್ದಾಳಿ ನಡೆಸಿದರು
I thank the TDP cadre and their leader for wishing what every patriotic Indian also wishes- that Modi goes back to Delhi and once again becomes the Prime Minister! I guess they have read the writing on the wall! pic.twitter.com/PSbY9l659k
— Narendra Modi (@narendramodi) February 10, 2019