Breaking News

ಕಲಬುರಗಿಯ ರೈಲ್ವೆ ಆದಾಯ ಸೊಲ್ಲಾಪುರಕ್ಕೆ ..!

ಗ್ರೇಡ್ ಎ ಕೆಟಗರಿಗೆ ನಿಲ್ದಾಣವನ್ನು ಸೇರಿಸಲು ಅಭಿಯಾನ....

SHARE......LIKE......COMMENT......
ಕಲಬುರಗಿ:

ಗುಲ್ಬರ್ಗ ರೈಲ್ವೆ ವಿಭಾಗವನ್ನು ಕೇಂದ್ರ ಸರ್ಕಾರ ಕಾರ್ಯಾನುಷ್ಠಾನಗೊಳಿಸಲು ಮೀನಮೇಷ ಎಣಿಸುತ್ತಿರುವ ಹೊತ್ತಿನಲ್ಲೇ ಹಾಲಿ ಇರುವ ಸೊಲ್ಲಾಪುರ ರೈಲ್ವೆ ವಿಭಾಗಕ್ಕೆ ಅರ್ಧದಷ್ಟು ಆದಾಯದ ಮೂಲ ಕಲಬುರಗಿ ಜಿಲ್ಲೆಯ ಮೂರು ನಿಲ್ದಾಣಗಳು ಎಂಬುದು ಗಮನಾರ್ಹ. ಇದು ಸಹಜವೇ ಸ್ಥಳೀಯರ ಡಿವಿಜನ್ ಧ್ವನಿಗೆ ಇನ್ನಷ್ಟು ಬಲ ನೀಡುವಂತಿದೆ.

ಈಗ ಸೊಲ್ಲಾಪುರ ವಿಭಾಗದಲ್ಲಿರುವ ಕಲಬುರಗಿ (ಗುಲ್ಬರ್ಗ), ಶಹಾಬಾದ್ ಮತ್ತು ವಾಡಿ ಜಂಕ್ಷನ್​ಗಳಿಂದ ವಾರ್ಷಿಕ ಶೇ.47 ಹಣ ಜಮೆಯಾಗುತ್ತಿದೆ ಎಂಬುದು 2017-18ರಲ್ಲಿ ಸಂಗ್ರಹಗೊಂಡ ಮೊತ್ತವೇ ಹೇಳುತ್ತದೆ. ಇದು ಇಲ್ಲಿ ರೈಲ್ವೆ ವಿಭಾಗ ಆರಂಭಿಸಿದರೆ ಆರ್ಥಿಕವಾಗಿ ಕಾರ್ಯಸಾಧುವಾಗಲಿದೆ ಎಂಬುದು ಸ್ಪಷ್ಟ.ಸೊಲ್ಲಾಪುರ ವಿಭಾಗ 845 ಕೋಟಿ ಅದಾಯ ಗಳಿಸಿದೆ. ಅದರಲ್ಲಿ ವಾಡಿ ಮತ್ತು ಶಹಾಬಾದ್ ನಿಲ್ದಾಣಗಳಿಂದಲೇ ಸುಮಾರು 400 ಕೋಟಿ ರೂ. ಸಂಗ್ರಹಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ನೀಡಿದ ಆರ್ಟಿಐ ಅಡಿ ಕೇಳಿರುವ ಮಾಹಿತಿಯಲ್ಲಿ ವಿವರಿಸಿದ್ದಾರೆ.

ಇದು ಈ ವರ್ಷವಷ್ಟೆ ಅಲ್ಲ, ಕಳೆದ 9 ವರ್ಷಗಳ ಅಂಕಿ ಸಂಖ್ಯೆ ನೋಡಿದಾಗಲೂ ಹೆಚ್ಚಿನ ಪಾಲು ಈ ಭಾಗದ್ದೇ ಆಗಿರುವುದು ವಿಶೇಷ. ರೈಲ್ವೆ ವಿಭಾಗ ಕೇಂದ್ರ ಸೊಲ್ಲಾಪುರವನ್ನು ಹಿಂದಿಕ್ಕುವ ವೇಗದಲ್ಲಿ ಕಲಬುರಗಿ ಪ್ರಗತಿ ಸಾಧಿಸುತ್ತಿದೆ. ಇದೇ ರೀತಿ ರೈಲ್ವೆ ಆದಾಯ ಹೆಚ್ಚುತ್ತ ನಡೆದರೆ ಕಲಬುರಗಿ ನಿಲ್ದಾಣವನ್ನು ಗ್ರೇಡ್ ಎ ಕೆಟಗರಿಗೆ ಸೇರಿಸಲು ರೈಲ್ವೆ ಮಂತ್ರಾಲಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಸೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಹೈಕ ರೈಲ್ವೆ ಅಭಿವೃದ್ಧಿ ಬಳಗ ಜಾಗೃತಿ ಅಭಿಯಾನ ಶುರುವಿಟ್ಟಿದೆ……