Breaking News

ಕಾಂಗ್ರೆಸ್​​- ಬಿಜೆಪಿ ನಡುವೆ ಶುರುವಾಯ್ತು ಟ್ವೀಟ್​​​​​​ ವಾರ್​​​..!

ಸಿದ್ದು ಟ್ವೀಟ್​ಗೆ ಡಿವಿಎಸ್ ತಿರುಗೇಟು....

SHARE......LIKE......COMMENT......

ಬೆಂಗಳೂರು:

ಕಾಂಗ್ರೆಸ್​​ ಮತ್ತು ಬಿಜೆಪಿ ನಾಯಕರ ನಡುವೆ ಟ್ವೀಟ್​​​​​​ ವಾರ್​​​ ಜೋರಾಗ್ತಿದೆ..ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ  ನೆನ್ನೆ ಟ್ವೀಟ್ ಮಾಡಿ ಭ್ರಷ್ಟಾಚಾರದ ಹಣದಿಂದ ಅಧಿಕಾರ ಪಡೆಯಲು ಬಿಜೆಪಿ ತಂತ್ರ ಮಾಡುತ್ತಿದೆ, ​ 25-30 ಕೋಟಿ ಕೊಟ್ಟು ‘ಕೈ’ ಶಾಸಕರನ್ನು ಖರೀದಿಸಲು BJP ಮುಂದಾಗಿದೆ ಎಂದು ಆಪರೇಷನ್ ಕಮಲಕ್ಕೆ ಸಿದ್ದರಾಮಯ್ಯ ಟ್ವೀಟ್​​​​​​ ಮಾಡಿದ್ದರು..

ಯೆಸ್ ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್‌ಗೆ ಕೇಂದ್ರ ಸಚಿವ ಸದಾನಂದಗೌಡರು ಸರಿಯಾಗಿ ಟ್ವೀಟ್ ಏಟು ಕೊಟ್ಟಿದ್ದಾರೆ. 25-35 ಕೋಟಿ ಕೊಟ್ಟು ಕಾಂಗ್ರೆಸ್​ ಶಾಸಕರನ್ನು ಬಿಜೆಪಿ ಕುದುರೆ ವ್ಯಾಪಾರ ಮಾಡ್ತಿದೆ ಅನ್ನೋ ಸಿದ್ದರಾಮಯ್ಯ ಟ್ವೀಟ್​ಗೆ ಡಿವಿಎಸ್ ಗರಂ ಆಗಿದ್ದಾರೆ ಹಾಗೂ ​​​​​‘ಕುದುರೆ ಏರಲಾರದವನು ಧೀರನೂ ಅಲ್ಲ, ಶೂರನೂ ಅಲ್ಲ’ ‘ನಿಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಇದೊಂದು ಹೊಸ ಪ್ರಹಸನ’. ಕನ್ನಡಿಗರು ಮುಗ್ದರು, ಮೂರ್ಖರಲ್ಲ, ನಿಮ್ಮ ಗಿಲೀಟು ಮಾತು ನಂಬಲ್ಲ ಎಂದು ತಿರುಗೇಟು ನೀಡಿದ್ದಾರೆ…..