ಚೆವೆಲ್ಲಾ ,ತೆಲಂಗಾಣ:
ಚೆವೆಲ್ಲಾ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕೊಂಡ ವಿಶ್ವೇಶ್ವರ್ ರೆಡ್ಡಿ ಅವರು ತಮ್ಮ ಕುಟುಂಬವು ₹ 895 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಇದರೊಂದಿಗೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಅತ್ಯಂತ ಶ್ರೀಮಂತ ರಾಜಕಾರಣಿ ಎನಿಸಿದ್ದಾರೆ ರೆಡ್ಡಿ ತಮ್ಮ ಹೆಸರಿನಲ್ಲಿ ₹ 225 ಕೋಟಿ,ಪತ್ನಿ ಕೆ. ಸಂಗೀತ ರೆಡ್ಡಿ ಹೆಸರಿನಲ್ಲಿ 613 ಕೋಟಿ ಚರಾಸ್ತಿ ಹೊಂದಿರುವುದಾಗಿ ಹಾಗೂ ಮಗನ ಹೆಸರಿನಲ್ಲಿ ₹ 20 ಕೋಟಿ ಮೌಲ್ಯದ ಚರಾಸ್ತಿ ಇರುವುದಾಗಿ ಘೋಷಿಸಿದ್ದಾರೆ,2014ರ ಚುನಾವಣೆ ವೇಳೆ ಕುಟುಂಬದ ಆಸ್ತಿ ಮೌಲ್ಯ ಒಟ್ಟು ₹ 528 ಕೋಟಿ ಎಂದು ದಾಖಲೆ ನೀಡಿದ್ದರು. ಆಗ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ಎಸ್) ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು….
I have filed my nomination for the #Chevella Parliamentary Constituency. #KondaVishweshwarReddy #KVRforMP #IndianNationalCongress pic.twitter.com/Wdk75OSv99
— Konda Vishweshwar Reddy (@KVishReddy) March 22, 2019