ನವದೆಹಲಿ:
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದರಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ ಇನ್ನೂ ಮೊದಲಾದ ರಾಜ್ಯಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿತ್ತು. ಸದ್ಯ ಕ್ಯಾರ್ ಚಂಡಮಾರುತ ಅಬ್ಬರ ಕಡಿಮೆಯಾಗಿದ್ದು, ಅದು ಒಮಾನ್ ಕಡೆ ಸಾಗಿದೆ. ಆದರೆ ಕ್ಯಾರ್ ಬಳಿಕ ಈಗ ಮತ್ತೊಂದು ಚಂಡಮಾರುತ ಭಾರತದ ಕರಾವಳಿಗೆ ಅಪ್ಪಳಿಸದೆ. ಅದೇ ಮಹಾ ಚಂಡಮಾರುತ. ನ.6ರ ಮಧ್ಯರಾತ್ರಿಯಿಂದ ಮಹಾ ಸೈಕ್ಲೋನ್ ತೀವ್ರತೆ ಹೆಚ್ಚಾಗಿರುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಪ್ರಕಾರ ನವೆಂಬರ್ 6ರ ಮಧ್ಯರಾತ್ರಿ ಗುಜರಾತ್ ಕರಾವಳಿಯತ್ತ ಸಾಗಿ ಬಳಿಕ ದಿಯು ಮತ್ತು ದ್ವಾರಕಗೆ ಪ್ರವೇಶಿಸಲಿದೆ. ನ.7ರಂದು ಕೂಡ ಮಹಾ ಅಬ್ಬರ ಇರಲಿದೆ. ಬಳಿಕ ಮಹಾ ತೀವ್ರತೆ ದುರ್ಬಲಗೊಳ್ಳಲಿದೆ. ನವೆಬರ್ 5 ಮತ್ತು 6ರಂದು ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ…….