Breaking News

ಚಿದಂಬರಂ ನಂ.1 ಆರೋಪಿ..!

ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಇಡಿ ಚಾರ್ಜ್ ಶೀಟ್....

SHARE......LIKE......COMMENT......

ನವದೆಹಲಿ:

ಏರ್ಸೆಲ್ ಮಾಕ್ಸಿಸ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಇಂದು  ಆರೋಪಪಟ್ಟಿಯನ್ನು ದಾಖಲಿಸಿದೆ.ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳನ್ನು ಹೆಸರಿಸಿರುವ ಇಡಿ ಚಿದಂಬರಂ ಅವರನ್ನು ನಂಬರ್ 1 ಆರೋಪಿ ಎಂದು ಕರೆದಿದೆ.

ಎಸ್. ಭಾಸ್ಕರಮಾನ್, ನಾಲ್ಕು ಮ್ಯಾಕ್ಸಿಸ್ ಕಂಪೆನಿಗಳು ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ. ಸೈನಿ ಸೇರಿ ಒಂಬತ್ತು ಆರೋಪಿಗಳನ್ನು ಇಲ್ಲಿ ಹೆಸರಿಸಲಾಗಿದೆ.ಏರ್ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಇಡಿ ಸಲ್ಲಿಸಿದ ಎರಡನೇ ಆರೋಪಪಟ್ಟಿ ಇದಾಗಿದೆ. ಚಿದಂಬರಂನ ಅವರ ಎಫ್ಐಪಿಬಿ ಅಕ್ರಮ ಅನುಮೋದನೆ ಕುರಿತಂತೆ ಇದರಲ್ಲಿ ವಿವರಗಳಿದೆ.

ಇದಕ್ಕೆ ಮುನ್ನ ಸಲ್ಲಿಕೆಯಾದ ಆರೋಪಪಟ್ಟಿಯಲ್ಲಿ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಸೋದರ ಕಲಾನಿಧಿ ಮಾರನ್ ಹಾಗೂ ಇತರರ ಹೆಸರು ನಮೂದಾಗಿತ್ತು.ಚಿದಂಬರಂ 2006 ರ ಮಾರ್ಚ್ ನಲ್ಲಿ  ಎಫ್ಐಪಿಬಿ ಅನುಮೋದನೆಯನ್ನು ನೀಡಿದ್ದಾರೆ ಮಾರಿಶಸ್ ಮೂಲದ ಗ್ಲೋಬಲ್ ಕಮ್ಯುನಿಕೇಷನ್ ಸರ್ವಿಸಸ್ ಹೋಲ್ಡಿಂಗ್ಸ್ ಲಿಮಿಟೆಡ್ನ ಅಂಗಸಂಸ್ಥೆ ಮ್ಯಾಕ್ಸಿಸ್ ಗೆ ಅನುಮೋದನೆ ದೊರಕಿದೆ ಎಂದು ಇಡಿ ಆರೋಪಿಸಿದೆ.

ಸಿಬಿಐ ಆರೋಪಪಟ್ಟಿಯಲ್ಲಿ ಹೆಸರಿಸಲಾದ ಮಾರನ್ ಸಹೋದರರು ಮತ್ತು ಇತರ ಆರೋಪಿಗಳನ್ನು ವಿಶೇಷ ನ್ಯಾಯಾಲಯವು ಬಿಡುಗಡೆ ಮಾಡಿದೆ. ಏಜನ್ಸಿಯು ಇವರ ವಿರುದ್ಧ ಯಾವ ಸೂಕ್ತ ದಾಖಲೆ ಒದಗಿಸಲು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.ಇದೇ ವೇಳೆ ಸಿಬಿಐ ಮತ್ತು ಇಡಿ ಆರೋಪಗಳನ್ನು ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ನಿರಾಕರಿಸಿದ್ದಾರೆ……