ಚೀನಾ:
ಚೀನಾದಲ್ಲಿ ಮರಣ ಮೃದಂಗ ಬಾರಿಸ್ತಿರುವ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಫ್ರಾನ್ಸ್, ಜಪಾನ್, ಕೆನಡಾ, ಅಮೆರಿಕ ಸೇರಿದಂತೆ 17ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಸೋಂಕು ಪತ್ತೆಯಾಗಿದೆ. ಕೊರೊನಾ ವೈರಸ್ ಸೋಂಕಿಗೆ ಈಗಾಗಲೇ 106 ಮಂದಿ ಬಲಿಯಾಗಿದ್ರೆ, 4,600 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಟಿಬೆಟ್ ಹೊರತುಪಡಿಸಿ ಚೀನಾದ ಎಲ್ಲ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಸೋಂಕು ತಗುಲಿರುವ ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ದಿನದಿನಕ್ಕೂ ಆತಂಕ ಹೆಚ್ಚುತ್ತಲೇ ಇದೆ. ಮುಂಬೈ, ಬೆಂಗಳೂರು, ದೆಹಲಿ, ಹೈದ್ರಾಬಾದ್, ಚೆನ್ನೈಗಳಲ್ಲಿ ವಿದೇಶಿಗರು ಮತ್ತು ಪ್ರವಾಸಿಗರ ಮೇಲೆ ತೀವ್ರ ನಿಗಾ ಇಡಲಾಗಿದೆ……