Breaking News

ಜಮೀನು ವಿವಾದ, ಬರ್ಬರ ಹತ್ಯೆ..!

ಮಾರಕ ಅಸ್ತ್ರಗಳಿಂದ ಹತ್ಯೆಗೈದು ದುಷ್ಕರ್ಮಿಗಳು ಪರಾರಿ....

SHARE......LIKE......COMMENT......

ದೇವದುರ್ಗ:

ಜಮೀನು ವಿವಾದ ಹಿನ್ನೆಲೆಯಲ್ಲಿ ಕಮಲದಿನ್ನಿಯಲ್ಲಿ ಯಂಕಣ್ಣ (56)ಎಂಬುವವರನ್ನು ಮಾರಕ ಅಸ್ತ್ರಗಳಿಂದ ಭಾನುವಾರ ಕೊಲೆ ಮಾಡಲಾಗಿದೆ. ಬೆಳಗಿನ ಜಾವ ಜಮೀನಿಗೆ ತೆರಳಿದ್ದ ಯಂಕಣ್ಣನನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಜಮೀನು ವಿವಾದ ಕಾರಣಕ್ಕೆ ಅದೇ ಗ್ರಾಮದ ವಿರೂಪಾಕ್ಷಪ್ಪ, ಸಿದ್ರಾಮರಡ್ಡಿ, ವೆಂಕಟರಾಯ್, ಅಂಚೆಸೂಗೂರಿನ ಸಂಗಣ್ಣ, ಶರಣಪ್ಪ, ಚನ್ನೂರು ಶಂಕರಗೌಡ, ಗೋಪಾಳಪುರ ತೇಜಪ್ಪ ವಿರುದ್ಧ ಮೃತನ ತಮ್ಮ ಭೀಮನಗೌಡ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ……..