ನವದೆಹಲಿ:
ಭಯೋತ್ಪಾದಕರನ್ನು ಪೋಷಿಸುವ ಪಾಕಿಸ್ತಾನವನ್ನು ಬಗ್ಗುಬಡಿಯುವ ಭಾರತದ ಸತತ ಪ್ರಯತ್ನಕ್ಕೆ ಭಾರಿ ಯಶ ಸಿಕ್ಕಿದೆ. ಮುಂಬೈ ಮತ್ತು ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್, ಜೈಶ್-ಎ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಅಜರ್ ಮಸೂದ್ನನ್ನು ಜಾಗತಿಕ ಉಗ್ರನೆಂದು ವಿಶ್ವಸಂಸ್ಥೆ ಘೋಷಿಸಿದೆ. ಈ ಮೂಲಕ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕ ಜಯ ಸಿಕ್ಕಿದ್ದು, ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಆಗ್ರಹಿಸುತ್ತಿತ್ತು. ಆದ್ರೆ ಇದಕ್ಕೆ ಚೀನಾ ತಾಂತ್ರಿಕ ಅಡ್ಡಗಾಲು ಹಾಕಿತ್ತು. ಆದ್ರೀಗ ತಾನು ಒಡ್ಡಿದ್ದ ತಾಂತ್ರಿಕ ತಡೆಯನ್ನು ಚೀನಾ ಕೂಡಾ ತೆರವುಗೊಳಿಸಿದೆ……