Breaking News

ಟೀಂ ಇಂಡಿಯಾ ನಾಯಕ ಕೊಹ್ಲಿ ಈಗ ಏಷ್ಯಾ ಕಿಂಗ್..!

ವಿರಾಟ್‌ನ ವಿಶ್ವ ದಾಖಲೆ..

SHARE......LIKE......COMMENT......

ಹೈದರಾಬಾದ್:

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಅಭೂತಪೂರ್ವ ದಾಖಲೆಯೊಂದನ್ನು ಮಾಡಿದ್ದಾರೆ.

ಇದರೊಂದಿಗೆ ವಿರಾಟ್ ಕೊಹ್ಲಿ ಏಷ್ಯಾದ ಕ್ರಿಕೆಟ್ ಆಡುವ ಎಲ್ಲಾ ರಾಷ್ಟ್ರಗಳ ತಂಡಕ್ಕೇ ಕಿಂಗ್ ಎನಿಸಿಕೊಂಡಿದ್ದಾರೆ. ವಿಂಡೀಸ್ ವಿರುದ್ಧ ಮೊದಲ ಇನಿಂಗ್ಸ್ ನಲ್ಲಿ 45 ರನ್ ಗಳಿಸಿದ ಕೊಹ್ಲಿ ನಾಯಕರಾಗಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಗಳ ಪೈಕಿ ಏಷ್ಯಾ ಖಂಡದ ಕ್ರಿಕೆಟ್ ಆಡುವ ರಾಷ್ಟ್ರಗಳಿಗೇ ಪ್ರಥಮರೆನಿಸಿದ್ದಾರೆ.

ಇದಕ್ಕೂ ಮೊದಲು ನಾಯಕರಾಗಿ ಅತೀ ಹೆಚ್ಚು ರನ್ ಗಳಿಸಿದ ಏಷ್ಯಾದ ದಾಖಲೆ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಹೆಸರಿನಲ್ಲಿತ್ತು. ಒಟ್ಟು 56 ಪಂದ್ಯಗಳಿಂದ ಮಿಸ್ಬಾ 4214 ರನ್ ಗಳಿಸಿದ್ದರು. ಕೊಹ್ಲಿ ಕೇವಲ 42 ಪಂದ್ಯಗಳಿಂದ ಈ ದಾಖಲೆ ಮುರಿದಿದ್ದಾರೆ…….