Breaking News

‘ಡಿಆರ್​56’ರ ಪೋಸ್ಟರ್ ರಿಲೀಸ್..!

ವಿವಾಹದ ಬಳಿಕ ಕನ್ನಡ ಚಿತ್ರದಲ್ಲಿ ಪ್ರಿಯಾಮಣಿ....

SHARE......LIKE......COMMENT......

ಸಿನಿಮಾ:

ವಿವಾಹದ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿರುವ ಬಹುಭಾಷಾ ನಟಿ ಪ್ರಿಯಾಮಣಿ, ಡಿಆರ್ 56 ಎಂಬ ವಿಭಿನ್ನ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶುಕ್ರವಾರ ಈ ಚಿತ್ರದ ಪೋಸ್ಟರ್​ ಬಿಡುಗಡೆಯಲ್ಲಿ ಪ್ರಿಯಾಮಣಿ ಕಾಣಿಸಿಕೊಂಡರು.

ಈ ಚಿತ್ರವು ಸಸ್ಪೆನ್ಸ್ ಹಾರರ್ ಆಗಿದ್ದು, ಚಿತ್ರದಲ್ಲಿ ನಟಿ ಪ್ರಿಯಾಮಣಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕನ್ನಡ ಚಿತ್ರರಂಗವೇ ಅಲ್ಲ ಇತರ ಚಿತ್ರರಂಗಗಳಲ್ಲಿಯೂ ಇಂತಹ ಕಥೆ ಬಂದಿಲ್ಲ ಎಂದು ಪ್ರಿಯಾಮಣಿ  ಹೇಳಿದರು.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರವೀಣ್ ಚಿತ್ರದ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಸುಮಾರು ಎರಡು ವರ್ಷಗಳಿಗೂ ಹೆಚ್ಚಿನ ಕಾಲ ಹೋಂವರ್ಕ್​ ಮಾಡಿರುವ ಪ್ರವೀಣ್, ಈಗ ಚಿತ್ರದ ಶೂಟಿಂಗ್​ಗೆ ರೆಡಿಯಾಗಿದ್ದಾರೆ.

ಪ್ರತಿನಿತ್ಯ ಪ್ರತಿಯೊಬ್ಬರು ತಮಗೆ ಅರಿವಿಲ್ಲದಂತೆ ಮಾಡುವ ತಪ್ಪನ್ನು ಸೂಕ್ಷ್ಮವಾಗಿ ಗಮನಿಸಿ ಜನರಿಗೆ ಅರಿವು ಮೂಡಿಸಲು ಪ್ರಯತ್ನ ಪಡುತ್ತಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಪ್ರತಿ 56 ಸೆಕೆಂಡಿಗೂ ತಪ್ಪು ಆಗುತ್ತಲೇ ಇರುತ್ತದೆ. ಆದ್ದರಿಂದ ಈ ಚಿತ್ರಕ್ಕೆ 56 ಎಂದು ಟೈಟಲ್ ಫಿಕ್ಸ್ ಮಾಡಿದ್ದೇವೆ.

ಈ ಚಿತ್ರವನ್ನು ನೋಡಿದ ಮೇಲೆ ಪ್ರತಿಯೊಬ್ಬರೂ ನಾವು ಇಂತಹ ತಪ್ಪನ್ನು ಮಾಡಿದ್ದೇವೆ ಎಂದು ನೆನೆಸಿಕೊಳ್ಳುತ್ತಾರೆ.ಡಿಸೆಂಬರ್ ಏಳರಿಂದ ಒಂಬತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ನಿರ್ದೇಶಕರು ಹೇಳಿಕೊಂಡಿದ್ದಾರೆ.
ಚಿತ್ರವನ್ನು ಏಕಕಾಲದಲ್ಲಿ ತಮಿಳು ಮತ್ತು ಕನ್ನಡದಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರ ರಿಲೀಸ್ ಆದ ಮೇಲೆ ನಿಜಕ್ಕೂ ಅಭಿಮಾನಿಗಳಲ್ಲಿ ಇಷ್ಟವಾಗಿ, ನಿರ್ಮಾಪಕರಿಗೆ ಹಾಕಿದ ಕಾಸು ತಂದುಕೊಡುತ್ತದೆ  ಎಂದು ನಿರ್ದೇಶಕ ರಾಜಿ ಆನಂದ್ ಲೀಲಾ ವಿಶ್ವಾಸ ವ್ಯಕ್ತಪಡಿಸಿದರು……

https://www.youtube.com/watch?v=JkqkUegHDiA