Breaking News

SBIಯಿಂದ ನಾಲ್ಕು ಸೇವೆಗಳು ಬದಲಾವಣೆ..!

ಡಿಜಿಟಲ್ ವಹಿವಾಟು ಪ್ರೋತ್ಸಾಹಕ್ಕಾಗಿ ಅಪಡೇಟ್....

SHARE......LIKE......COMMENT......

ನವದೆಹಲಿ :

ಎಸ್.ಬಿ.ಐ. ತನ್ನ ಗ್ರಾಹಕರ ಹಿತದೃಷ್ಟಿಯಿಂದ ಮುಂದಿನ 60 ದಿನಗಳಲ್ಲಿ ಅದರ ನಾಲ್ಕು ಸೇವೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಆ ನಾಲ್ಕು ಸೇವೆಗಳು ಯಾವುವು ಎಂಬ ಕಂಪ್ಲೀಟ್ ಮಾಹಿತಿ ಇಲ್ಲಿದೆ…

*ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಡಿಸೆಂಬರ್ 1ರ ಒಳಗೆ ಬ್ಯಾಂಕಿನೊಂದಿಗೆ ನೋಂದಾಯಿಸಬೇಕು. ಇಲ್ಲವಾದರೆ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

*ನವೆಂಬರ್ 1ರಿಂದ ತನ್ನ ಎಸ್.ಬಿ.ಐ. ಬುಡ್ಡಿ ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿರುವ ಕಾರಣ  ಅದರ ಬದಲು ಈಗಾಗಲೇ ಚಲಾವಣೆಯಲ್ಲಿರುವ ಯುನೋ ವ್ಯಾಲೆಟ್ ಅನ್ನು ಬಳಕೆ ಮಾಡಬೇಕೆಂಬುದಾಗಿ ತಿಳಿಸಿದೆ.

*ಬ್ಯಾಂಕಿನ ಕ್ಲಾಸಿಕ್ ಮತ್ತು ಮೆಸ್ಟ್ರೋ ಕಾರ್ಡ್ ಗಳನ್ನು ಬಳಸುವ ಗ್ರಾಹಕರು ಅಕ್ಟೋಬರ್ 31ರ ನಂತರ ಎಟಿಎಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಹಣ ತೆಗೆಯಲು ಸಾಧ್ಯವಾಗುವುದಿಲ್ಲ.

*ಎಟಿಎಂಗಳಿಂದ ನಗದ ಹಣ ತೆಗೆದುಕೊಳ್ಳುವಾಗ ನಡೆಯುವ ವಂಚನೆಯನ್ನು ತಪ್ಪಿಸಲು ಡಿಜಿಟಲ್ ವಹಿವಾಟನ್ನು ಪ್ರೋತ್ಸಾಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಎಟಿಎಂನಿಂದ ಹಣ ಪಡೆದುಕೊಳ್ಳುವ ಮಿತಿ ಕಡಿತಗೊಳಿಸಲಾಗುತ್ತಿದೆ. ಹಾಗೇ ಮ್ಯಾಗ್ನೆಟಿಕ್ ಸ್ವೈಪ್ ಆಧಾರಿತ ಡೆಬಿಟ್ ಕಾರ್ಡುಗಳ ಬಳಕೆ  ಡಿಸೆಂಬರ್ ನಿಂದ ಸ್ಥಗಿತಗೊಳ್ಳಲಿರುವ ಕಾರಣ ಈಗಾಗಲೇ ಹಳೆ ಕಾರ್ಡ್ ಬದಲು ಚಿಪ್ ಆಧಾರಿತ ಕಾರ್ಡ್ ಗಳನ್ನು ವಿತರಿಸಲಾಗುತ್ತಿದೆ…..