ತಮಿಳುನಾಡು:
ತಮಿಳುನಾಡಿನ ವೆಲ್ಲೂರು ಲೋಕಸಭೆ ಕ್ಷೇತ್ರದ ಚುನಾವಣೆ ರದ್ದಾಗಿದೆ. ಮಾರ್ಚ್ ಕೊನೆ ವಾರದಲ್ಲಿ ಡಿಎಂಕೆ ಪಕ್ಷದ ಅಭ್ಯರ್ಥಿ ಹಾಗೂ ದೊರೈ ಮುರುಗನ್ ಪುತ್ರ ಕಥೀರ್ ಆನಂದ್ ನಿವಾಸದ ಮೇಲೆ ಐಟಿ ದಾಳಿ ನಡೆಸಿ ₹11.5 ಕೋಟಿ ಹಣವನ್ನು ವಶಪಡಿಸಿಕೊಂಡಿತ್ತು. ಹಣ ಸಿಕ್ಕ ಹಿನ್ನೆಲೆ ಚುನಾವಣಾ ಆಯೋಗ ಎಲೆಕ್ಷನ್ ರದ್ದುಗೊಳಿಸಿದೆ. ಮತದಾರರಿಗೆ ಹಣ ನೀಡಲು ಮುಂದಾಗಿದ್ದಾರೆ ಅನ್ನೋ ಆರೋಪದ ಮೇರೆಗೆ ಏಪ್ರಿಲ್ 18 ರಂದು ನಡೆಯಬೇಕಿದ್ದ ವೆಲ್ಲೂರು ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಿದ್ದಾರೆ. ಐಟಿ ಅಧಿಕಾರಿಗಳ ದೂರು ಆಧರಿಸಿ ಪರಿಶೀಲಿಸಿದ ಆಯೋಗ ಚುನಾವಣಾ ರದ್ದು ಮಾಡುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. ಆಯೋಗದ ಶಿಫಾರಸಿಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ…..