Breaking News

ತೂಕ ಹೆಚ್ಚಿಸಿಕೊಂಡ ಗಣೇಶ್‌..!

'99' ಚಿತ್ರದ ಪಾತ್ರಕ್ಕೆ ಕಸರತ್ತು ಮಾಡಿದ Golden star....

SHARE......LIKE......COMMENT......

ಸಿನಿಮಾ:

ಗಣೇಶ್‌ ಇದೇ ಮೊದಲು ಈ ಗೆಟಪ್‌ನಲ್ಲಿ ಈ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ದಪ್ಪ ಬೆಳೆದಿರುವ ದಾಡಿ, ಗುಂಡು ಗುಂಡಾಗಿರುವ ದೇಹ ಇದೆಲ್ಲಾ ಹೇಗೆ ಸಾಧ್ಯ? ಅದು ’99’ ಆಗಿದ್ದಕ್ಕೆ ಸಾಧ್ಯವಾಗಿದೆ ಅನ್ನೋದು ಚಿತ್ರತಂಡದ ಮಾತು. ’99’ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣ ಪೂರ್ಣಗೊಂಡಿದೆ. ನಿರ್ದೇಶಕ ಪ್ರೀತಂಗುಬ್ಬಿ ಮತ್ತು ಗಣೇಶ್‌ ಕಾಂಬಿನೇಷನ್‌ನ ಮೂರನೇ ಸಿನಿಮಾ ಇದು.

ಇದೊಂದು ಅದ್ಭುತವಾದ ಪ್ರೇಮಕಾವ್ಯ. ಇಲ್ಲೊಂದು ಲವ್‌ಸ್ಟೋರಿ ಇದೆಯಾದರೂ, ಅದು ಬೇರೆಯದ್ದೇ ಮಜಾ ಕೊಡುವಂತಹ ಲವ್‌ಸ್ಟೋರಿ. ’99’ ಚಿತ್ರದ ಪಾತ್ರಕ್ಕೆ ಬರೋಬ್ಬರಿ ಐದು ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಗಣೇಶ್‌. ಅದೂ ಕೇವಲ ಒಂದುವರೆ ತಿಂಗಳಲ್ಲಿ ಅನ್ನೋದು ವಿಶೇಷ.

ಈಗ ಗಣೇಶ್‌ ‘ಗೀತಾ’ ಚಿತ್ರಕ್ಕಾಗಿ ಮತ್ತೆ ತೂಕ ಇಳಿಸುವ ತಯಾರಿಯಲ್ಲಿದ್ದಾರೆ. ಬೆಳಗ್ಗೆ ಎದ್ದವರೇ, ಓಡುತ್ತಿದ್ದಾರೆ. ಮತ್ತೆ ಸಣ್ಣಗಾಗಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ‘ಗೀತಾ’ ಚಿತ್ರದ ಪಾತ್ರ ಕೂಡ ಹೊಸದಾಗಿದೆ. ಹಾಗಾಗಿ, ಅದಕ್ಕೆ ಈಗಾಗಲೇ ತೂಕ ಇಳಿಸಿಕೊಳ್ಳಲು ಮತ್ತೆ ಓಟ ಶುರುಮಾಡಿದ್ದಾರಂತೆ……