Breaking News

ತೆಲಂಗಾಣ-ಕರ್ನಾಟಕ ಸರ್ಕಾರ ಸೇರಿ ಪ್ರೇಮಿಗಳ ಮದ್ವೆ..!

ಪೊಲೀಸ್ ಸರ್ಪಗಾವಲಿನಲ್ಲಿ ಪ್ರೇಮಿಗಳ ಮ್ಯಾರೇಜ್.....

SHARE......LIKE......COMMENT......

ಕೊಪ್ಪಳ:

ಎರಡು ಸರ್ಕಾರಗಳು ಸೇರಿ ಪ್ರೇಮಿಗಳ ಮದ್ವೆ ಮಾಡಿಸಿವೆ. ಹೌದು ಇಂಥಾದ್ದೊಂದು ಪ್ರಕರಣ ಕೊಪ್ಪಳದ ಗಂಗಾವತಿಯಲ್ಲಿದೆ ನಡೆದಿದೆ. ಗಂಗಾವತಿಯ ಉಳೇನೂರು ಗ್ರಾಮದ ಯುವಕ ವೆಂಕಟ್ ಭಾರ್ಗವ್ ಹೈದ್ರಾಬಾದ್​ನ ಸೆವನ್ ಸ್ಟಾರ್ ಹೋಟೆಲ್​ನಲ್ಲಿ ಷೆಫ್ ಆಗಿದ್ದ. ಗಂಗಾವತಿಯ ಸಿದ್ದಾಪುರ ಗ್ರಾಮದ ಯುವತಿ ನಿರಂಜನಿ ಬೆಂಗಳೂರಿನ ಬ್ಯಾಂಕೊಂದರಲ್ಲಿ ಕೆಲಸ ಮಾಡ್ತಿದ್ಳು.ಇಬ್ಬರೂ ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದರು…

ಸಂಬಂಧಿಕರಾದ್ರು ಯುವತಿಯ ಮನೆಯವ್ರು ಮದ್ವೆಗೆ ಒಪ್ಪಿರಲಿಲ್ಲ. ಹಿಗಾಗಿ ಯುವತಿ ಆಲ್ ಇಂಡಿಯಾ ಡೆಮೋಕ್ರೋಟಿಕ್ ಅಸೋಷಿಯನ್ ಮೊರೆಹೋಗಿದ್ಳು. ಆಲ್ ಇಂಡಿಯಾ ಡೆಮೋಕ್ರೋಟಿಕ್ ಅಸೋಷಿಯನ್ ತೆಲಂಗಾಣ ರಾಜ್ಯಪಾಲರಿಗೆ ಪತ್ರ ಬರೆದಿತ್ತು. ಪತ್ರದಂತೆ ತೆಲಂಗಾಣ ರಾಜ್ಯಪಾಲರು ಕರ್ನಾಟಕ ಡಿಜಿ ಐಜಿಪಿಗೆ ಪತ್ರ ಬರೆದು ಮದ್ವೆ ಮಾಡಿಸುವಂತೆ ಸೂಚಿಸಿಸದ್ರು. ಅದರಂತೆ ಇವತ್ತು ಗಂಗಾವತಿಯ ವಿದ್ಯಾನಗರದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಪ್ರೇಮಿಗಳ ಮದುವೆ ನಡೀತು…..