ಮಲಯಾಳಂನ ಖ್ಯಾತ ತಾರಾ ಜೋಡಿಯಾದ ದಿಲೀಪ್ ಮತ್ತು ಕಾವ್ಯಾ ಮಾಧವನ್ ಗೆ ಹೆಣ್ಣು ಮಗು ಜನಿಸಿದೆ. ವಿಜಯದಶಮಿ ದಿನ ಶುಕ್ರವಾರ ಕಾವ್ಯಾ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಈ ಸಂತಸದ ವಿಷಯವನ್ನು ದಿಲೀಪ್ ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
ಅವರು ತಮ್ಮ ಪೋಸ್ಟ್ ನಲ್ಲಿ, ಪ್ರೀತಿಪಾತ್ರರೇ, ವಿಜಯದಶಮಿಯ ಶುಭದಿನ ನನಗೆ ಹೆಣ್ಣು ಮಗು ಜನಿಸಿದೆ, ನನ್ನ ಮಗಳು ಮೀನಾಕ್ಷಿಗೆ ಕಿರಿ ಸೋದರಿ ಸಿಕ್ಕಿದ್ದಾಳೆ. ಮಗು, ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ನಮ್ಮ ಜೊತೆ ನಿಮ್ಮ ಪ್ರೀತಿ, ಹಾರೈಕೆ ಸದಾ ಇರಲಿ ಎಂದು ಕೇಳಿದ್ದಾರೆ…..