ಬೆಂಗಳೂರು:
ಜಯಲಲಿತಾ ಆಪ್ತೆಯರಾದ ಶಶಿಕಲಾ ನಟರಾಜನ್ ಹಾಗೂ ಇಳವರಸಿ ಕನ್ನಡದಲ್ಲಿ ಒಂದು ವರ್ಷದ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ಗೆ ಸಹಿ ಹಾಕಿದ ಬೆನ್ನಲ್ಲಿಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ 257 ವಿಚಾರಣಾಧೀನ ಕೈದಿಗಳು ನಾನಾ ದೂರಶಿಕ್ಷಣ ಕೋರ್ಸ್ಗಳನ್ನು ಮಾಡಲು ಸಹಿ ಹಾಕಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 257 ಕೈದಿಗಳು ಬಿಎ, ಬಿಕಾಂ, ಎಂಕಾಂ ಪದವಿ (ಮೂರು ವರ್ಷ) ಹಾಗೂ ಒಂದು ವರ್ಷದ ಪಿಜಿ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಲು ಅರ್ಜಿಗೆ ಸಹಿ ಹಾಕಿದರು. ವಿವಿ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್, ಕುಲಸಚಿವ ಡಾ.ಬಿ.ಕೆ. ರವಿ ಸಮಾರಂಭಕ್ಕೆ ಸಾಕ್ಷಿಯಾದರು.
ಸಮಾರಂಭದಲ್ಲಿ ಮಾತನಾಡಿದ ಕುಲಪತಿ ಪ್ರೊ.ಕೆ.ಆರ್. ವೇಣುಗೋಪಾಲ್ ಕೈದಿಗಳು ಶಿಕ್ಷೆ ಅನುಭವಿಸಿ ಬಿಡುಗಡೆ ಹೊಂದಿದ ನಂತರ ಜೀವನದಲ್ಲಿ ಆಶಾದಾಯಕ ಭರವಸೆ ಮೂಡಿಸಲು ಈ ಕೋರ್ಸ್ಗಳು ಸಹಕಾರಿಯಾಗಲಿವೆ, ಎಂದು ಹೇಳಿದರು……