ನವದೆಹಲಿ:
ರಾಜ್ಯದಲ್ಲಿ ದೋಸ್ತಿ ಪಕ್ಷಗಳು ಸೀಟ್ ಹಂಚಿಕೆ ಕಸರತ್ತಿನಲ್ಲಿರುವಾಗಲೇ ಬಿಜೆಪಿ ಅಭ್ಯರ್ಥಿಗಳನ್ನು ಅಂತಿಮಗೊಳಿಸೋ ಪ್ರಯತ್ನ ಚುರುಕುಗೊಳಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಮೇತ ದೆಹಲಿಗೆ ತೆರಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಮಾತುಕತೆ ನಡೆಸಿ ಹಾಲಿ ಬಿಜೆಪಿ ಸಂಸದರ ಭವಿಷ್ಯ ಇಂದು ನಿರ್ಧಾರ ಮಾಡಲಿದ್ದಾರೆ ಹಾಗೂ ಮಂಡ್ಯದಲ್ಲಿ ಸ್ಪರ್ಧೆಯೋ, ಸುಮಲತಾಗೆ ಬೆಂಬಲವೋ ಎನ್ನುವ ಬಗ್ಗೆಯೂ ಚರ್ಚೆ ಕೂಡ ನಡೆಯಲಿದ್ದು,ಇಂದು ಸಂಜೆ ಅಥವಾ ನಾಳೆ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ…..