Breaking News

ಗ್ರಾಮಗಳ ಐಕ್ಯತೆಗೆ ದೇವಾಲಯಗಳು ಕಾರಣ..!

ನಿರ್ವಹಣೆ ಆಗದಿದ್ದರೆ ಪ್ರಯೋಜನವಿಲ್ಲ ಎಂದ ಶಾಸಕರು....

SHARE......LIKE......COMMENT......

ಕುಣಿಗಲ್:

ಗ್ರಾಮಗಳಲ್ಲಿ ಐಕ್ಯತೆಗೆ ದೇವಾಲಯಗಳು ಕಾರಣ ಎಂದು ಶಾಸಕ ಡಾ.ಎಚ್.ಡಿ.ರಂಗನಾಥ್ ಹೇಳಿದರು. ಆಲ್ಕೆರೆ-ಹೊಸಹಳ್ಳಿ ಮಲ್ಲೇಶ್ವರಸ್ವಾಮಿ ದೇವಾಲಯದ ಪ್ರಥಮ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಲೋಕ ಕಲ್ಯಾಣಕ್ಕಾಗಿ ಪೂರ್ವಿಕರು ಗ್ರಾಮಗಳಲ್ಲಿ ವಿವಿಧ ದೇವಾಲಯ ನಿರ್ವಿುಸಿದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಕಾರ್ಯಕ್ರಮ ನಡೆಸುತ್ತಿದ್ದರು. ಆ ಸಂಬಂಧಗಳು ಉಳಿಯಲು ದೇವಾಲಯ ಕಾರಣವಾಗಿವೆ ಎಂದರು.

ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ವಿುಸಲಾಗುತ್ತಿದೆ. ಆದರೆ ನಿರ್ವಹಣೆ ಸಮರ್ಪಕವಾಗಿ ಆಗದಿದ್ದರೆ ಪ್ರಯೋಜನವಿಲ್ಲ ಎಂದರು. ಲಕ್ಷ್ಮೀದೇವಿ ದೇವಾಲಯದಿಂದ ನೂರಾರು ಮಹಿಳೆಯರು ಆರತಿ ಹಾಗೂ ಕಳಸ ಹೊತ್ತು ವಾದ್ಯಗೋಷ್ಠಿಗಳೊಂದಿಗೆ ದೇವಾಲಯಕ್ಕೆ ಹೊತ್ತು ತಂದರು. ಬಳಿಕ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಮಲ್ಲೇಶ್ವರಸ್ವಾಮಿ ಭಕ್ತ ಮಂಡಲಿ ಕಾರ್ಯದರ್ಶಿ ಎ.ಎನ್.ಕುಮಾರ್, ಉಪಾಧ್ಯಕ್ಷ ಎಚ್.ಜಿ. ಜಯಕುಮಾರ್, ಖಜಾಂಚಿ ಎ.ಜಿ ಕಪನಯ್ಯ, ಸದಸ್ಯರಾದ ಗಂಗಯ್ಯ, ಎ.ಎನ್.ನಂಜುಂಡಸ್ವಾಮಿ, ಮೋಹನ್, ನಂಜುಡಯ್ಯ, ಗಂಗರಂಗಯ್ಯ, ಎ.ಎಲ್.ನಂಜಪ್ಪ, ನಂಜುಡಯ್ಯ, ನಂಜಯ್ಯ, ಗಂಗಾಧರಯ್ಯ, ಶಿವರುದ್ರಾಚಾರ್ ಇದ್ದರು……