Breaking News

ದೇವಾಲಯಗಳಲ್ಲಿ ಗೋಪುರದ ಮಹತ್ವವೇನು..?

ದೇವಾಲಯ ಪ್ರವೇಶಿಸುವ ಮುನ್ನ ಯಾವೆಲ್ಲಾ ನಿಯಮಗಳನ್ನ ಪಾಲಿಸಬೇಕು....

SHARE......LIKE......COMMENT......

:

ದೇವಾಲಯಗಳಲ್ಲಿ ಗೋಪುರ ನಿರ್ಮಾಣ ಕಾರಣ ಹಾಗೂ ಮಹತ್ವವೇನು?

ಪ್ರಾಚೀನಾ ಭಾರತದ ದೇವಾಲಯಗಳಲ್ಲಿ ಕುತೂಹಲಕ್ಕೆ ಕಾರಣವಾಗುವ ಅಂಶಗಳು ಅನೇಕ. ಅಂಥದ್ದೇ ಒಂದು ಅಂಶ ದೇವಾಲಯ ಪ್ರವೇಶಿಸುತ್ತಿದ್ದಂತೆ ಎದುರಾಗುವ ಗೋಪುರಗಳು. ತಂತ್ರಜ್ನಾನ ಬೆಳವಣಿಗೆಯಾಗದ ಅಂಥಹ ಕಾಲದಲ್ಲೂ ಉದ್ದುದ್ದದ ಗೋಪುರಗಳನ್ನು ನಿರ್ಮಿಸುತ್ತಿದ್ದ ಹಿಂದಿರಬಹುದಾದ ಕಾರಣಗಳನ್ನು ಹಲವು ರೀತಿಯಲ್ಲಿ ವಿಶ್ಲೇಷಿಸಬಹುದು.

ಗೋಪುರದ ಮೇಲೆ ಕಳಶ ಸ್ಥಾಪನೆ ಮಾಡಲಾಗಿರುತ್ತದೆ. ಗೋಪುರದಲ್ಲಿ ವಿದ್ಯುತ್ ವಾಹಕಗಳಾದ ಬೆಳ್ಳಿ ಚಿನ್ನ, ಹಿತ್ತಾಳೆ ಅಥವಾ ಪಂಚಲೋಹದ ಕಳಸ ಸ್ಥಾಪನೆ ಮಾಡಲಾಗುತ್ತದೆ. ಇದಕ್ಕೂ ಮುನ್ನ ಕಳಶದಲ್ಲಿ ವಿದ್ಯುತ್ ಪ್ರವಾಹವನ್ನು ಅರ್ತಿಂಗ್ ಮಾಡಲು ಸಹಾಯಕಾರಿಯಾಗಿರುವ ಉಪ್ಪು, ಭತ್ತ, ರಾಗಿ, ಮುಂತಾದ ಧಾನ್ಯಗಳನ್ನು ಕಳಶದಲ್ಲಿ ತುಂಬಲಾಗುತ್ತದೆ. ಹೀಗೆ ಮಾಡುವುದರಿಂದ ಗುಡುಗು, ಮಿಂಚು ಸಹಿತ ಮಳೆ ಬಂದು ಸಿಡಿಲು ಬಡಿದರೂ ಎತ್ತರದ ಗೋಪುರದ ಮೇಲಿರುವ ಈ ಕಳಶಗಳಿಗೆ ಮೊದಲು ತಾಗಿ, ಊರಿನ ಇತರ ಪ್ರದೇಶಗಳಿಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಬಹುದೆಂಬುದು
ಗೋಪುರ ನಿರ್ಮಾಣಕ್ಕೆ ಇರುವ ಮುಖ್ಯ ಕಾರಣಗಳಲ್ಲಿ ಒಂದು ಎಂಬುದು ಹಲವರ ಅಭಿಪ್ರಾಯ.

ಆದ್ದರಿಂದಲೇ ದೇವಾಲಯಗಳಿಲ್ಲದ ಪ್ರದೇಶದಲ್ಲಿ ವಾಸ ಮಾಡಬೇಡಿ ಎಂಬ ನಾಣ್ಣುಡಿ ಹುಟ್ಟಿಕೊಂಡಿರುವುದು. ಈ ಅಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡುವಂತೆ, ಗೋಪುರಕ್ಕೆ ಪ್ರತಿ 12 ವರ್ಷಗಳಿಗೊಮ್ಮೆ ಕುಂಭಾಭಿಷೇಕ ಮಾಡಲಾಗುತ್ತದೆ. 12 ವರ್ಷದ ನಂತರ ಕಳಶದಲ್ಲಿರುವ ಧಾನ್ಯಗಳು ಅರ್ತಿಂಗ್ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತವೆ ಆದ್ದರಿಂದ  ಮತ್ತೊಮ್ಮೆ ಕಳಶಗಳಲ್ಲಿ ಹೊಸ ಧಾನ್ಯಗಳನ್ನು ತುಂಬಲು ಕುಂಭಾಭಿಷೇಕ ಮಾಡಲಾಗುತ್ತದೆ ಎಂಬ ನಂಬಿಕೆಯೂ ಇದೆ.

ಇನ್ನೂ ಕೆಲವರ ಪ್ರಕಾರ ಪ್ರಾಚೀನ ಕಾಲದಲ್ಲಿ ಆಧುನಿಕ ತಂತ್ರಜ್ನಾನ ಇಲ್ಲದಿದ್ದರ ಕಾರಣ, ದೂರದ ಪ್ರದೇಶಗಳನ್ನು ಗುರುತಿಸಲು ಉದ್ದುದ್ದ ಇರುತ್ತಿದ್ದ ಗೋಪುರಗಳು ಉಪಯುಕ್ತವಾಗುತ್ತಿತ್ತು, ಅರ್ಥಾತ್ ಕಿಲೋಮೀಟರ್ ಗಟ್ಟಲೆ ದೂರವಿರುತ್ತಿದ್ದ ಪ್ರದೇಶವನ್ನು ಗುರುತಿಸಲು ಇಂದಿನ ಲೇಸರ್ ದೀಪಗಳಂತೆ ಬಳಕೆಯಾಗುತ್ತಿದ್ದವಂತೆ. ಅಷ್ಟೇ ಅಲ್ಲದೇ ವಾಚ್ ಟವರ್ (ಕಾವಲುಗೋಪುರ)ಗಳಾಗಿಯೂ ದೇವಾಲಯದ ಗೋಪುರಗಳನ್ನು ನಿರ್ಮಿಸಲಾಗುತ್ತಿತ್ತು ಎಂಬ ಅಭಿಪ್ರಾಯವಿದೆ.

ಗರ್ಭಗುಡಿಯ ಸುತ್ತ ಸುತ್ತುಬರುವುದರ ಹಿನ್ನಲೆ ಏನು?

ಹಿಂದಿನ ಕಾಲದಲ್ಲಿ ಮನೆಯ ಹಿರಿಯರು, ಸಾವಿರಾರು ವರುಷಗಳ ಪುರಾತನ ದೇಗುಲಗಳಿಗೆ ಭೇಟಿ ನೀಡಿ ತಮ್ಮ ಇಷ್ಟದೇವರಿಗೆ ಪೂಜೆ ಸಲ್ಲಿಸಿ ದೇವರಿಂದ ರಕ್ಷಣೆ ಮತ್ತು ಅನುಗ್ರಹವನ್ನು ಅಪೇಕ್ಷಿಸುವುದನ್ನು ನಮ್ಮ ಮನೆಯ ಹಿರಿಯರಿಂದ ಕೇಳಿರುತ್ತೇವೆ

ದೇವಾಲಯ ಪ್ರವೇಶಿಸುವ ಮುನ್ನ ಈ ನಿಯಮಗಳೆಲ್ಲಾ ನೆನಪಿರಲಿ…

ಆದರೆ, ಇದರ ಮಹತ್ವ ಅರಿಯದ ಯುವಜನತೆಗೆ ಇದೊಂದು ಸಮಯ ಪೋಲು ಮಾಡುವ ಬೂಟಾಟಿಕೆ ಎಂದು ಅನ್ನಿಸಬಹುದು. ಆದರೆ ವೈಜ್ಞಾನಿಕವಾಗಿ ಪರೀಕ್ಷಿಸಿದ ಬಳಿಕ ಈ ವಿಧಿಯಲ್ಲಿ ನಿಜವಾಗಿಯೂ ಪ್ರಯೋಜನವಿದೆ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಭಾರತದ ಹೆಚ್ಚಿನ ದೇಗುಲಗಳು ಗುಡ್ಡದ ತುದಿಯಲ್ಲಿ, ಬಟಾಬಯಲಿನಲ್ಲಿ, ಸಮುದ್ರ ತೀರದಲ್ಲಿ, ನದಿ ತೀರದಲ್ಲಿ ಹಾಗೂ ಎತ್ತರದ ಸ್ಥಳಗಳಲ್ಲಿಯೇ ನಿರ್ಮಿಸಲ್ಪಟ್ಟಿವೆ. ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ದೇವಾಲಯವನ್ನು ನಿರ್ಮಿಸುವ ಮೊದಲು ಈ ಸ್ಥಳದ ಅಕ್ಕಪಕ್ಕ ಸದಾ ಧನಾತ್ಮಕ ಶಕ್ತಿ ಪ್ರವಹಿಸುತ್ತಿದೆ ಎಂದು ಖಾತರಿಪಡಿಸಿಕೊಂಡ ಬಳಿಕವೇ ಅಲ್ಲಿ ದೇವಾಲಯದ ನಿರ್ಮಾಣ ಕಾರ್ಯ ಪ್ರಾರಂಭವಾಗುತ್ತಿತ್ತಂತೆ. ವೈಜ್ಞಾನಿಕವಾಗಿ ಈ ಸ್ಥಳಗಳನ್ನು ಅವಲೋಕಿಸಿದಾಗ ಭೂಮಿಯ ಆಯಸ್ಕಾಂತೀಯ ಅಲೆಗಳು ಮತ್ತು ವಿದ್ಯುತ್ ಅಲೆಗಳು ಉತ್ತರ ಧ್ರುವದಿಂದ ದಕ್ಷಿಣ ಧೃವದತ್ತ ಯಾವುದೇ ಅಡೆತಡೆಯಿಲ್ಲದೇ ಈ ದೇಗುಲದ ಮೂಲಕ ಹಾದು ಹೋಗುತ್ತಿದೆ, ಎಂದು ಸಮೀಕ್ಷೆಗಳು ಈಗಾಗಲೇ ದೃಢಪಡಿಸಿವೆ.

ಗರ್ಭಗುಡಿಯ ಸುತ್ತ ಸುತ್ತುಬರುವುದು…

ಪೂಜೆಯ ಬಳಿಕ ಗರ್ಭಗುಡಿಯ ಸುತ್ತ ಸುತ್ತುಬರುವುದು, ಹಿಂದೂ ಧರ್ಮದಲ್ಲಿ ಧಾರ್ಮಿಕ ವಿಧಿಯಾಗಿದೆ, ಈ ವಿಧಿಯ ವೈಜ್ಞಾನಿಕ ಕಾರಣವನ್ನು ಅವಲೋಕಿಸಿದರೆ ಇದಕ್ಕೂ ಆಯಸ್ಕಾಂತೀಯ ಅಲೆ ಕಾರಣವಾಗಿರುವುದು ಕಂಡುಬರುತ್ತದೆ. ಅಷ್ಟೇ ಅಲ್ಲದೆ, ಇದರಿಂದ ಮಾನಸಿಕ ಶಾಂತಿ ಮನದಲ್ಲಿ ನೆಲೆಸಲು ಹಾಗೂ ಧನಾತ್ಮಕ ಶಕ್ತಿ ಪ್ರವಹಿಸಲು ಸಾಧ್ಯವಾಗುತ್ತದೆ…….