ಬೆಂಗಳೂರು:
ಇಂದು ದೇಶಾದ್ಯಂತ ಶಿವರಾತ್ರಿ ಹಬ್ಬ.. ಕೈಲಾಸವಾಸಿ ಪರಶಿವನನ್ನು ಕೋಟಿ ಕೋಟಿ ಜನ ಭಜಿಸಿ ಪೂಜಿಸುವ ದಿನ. ಜನ್ಮಕ್ಕೊಂದು ಶಿವರಾತ್ರಿ ಅಂತ ಹಿರಿಯರು ಹೇಳುವ ಮೂಲಕ ಶಿವರಾತ್ರಿ ಎಷ್ಟೆಲ್ಲಾ ಮಹತ್ವದ್ದು ಅನ್ನೋದು ತಿಳಿಯುತ್ತೆ. ಇನ್ನು ಮಹಾ ಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕಗಳು ನಡೆಯುತ್ತಿವೆ. ಹೂಗಳಿಂದ ಶಿವ ದೇವಾಲಯಗಳು ಅಲಂಕೃತಗೊಂಡು ಕಂಗೊಳಿಸುತ್ತಿವೆ. ಸಂಜೆ ಶಿವರಾತ್ರಿ ಜಾಗರಣೆಗೂ ಸಿದ್ಧತೆ ನಡೆದಿದೆ……