Breaking News

ಧಾರವಾಡ ಕಟ್ಟಡ ದುರಂತ ಸಾವಿನ ಸಂಖ್ಯೆ19ಕ್ಕೆ ಏರಿಕೆ..

ಸತತ 6ನೇ ದಿನವೂ ಶೋಧಕಾರ್ಯ ಮುಂದುವರಿಕೆ.....

SHARE......LIKE......COMMENT......

ಧಾರವಾಡ :

ಧಾರವಾಡ ಕಟ್ಟಡ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣೆಗಾಗಿ ಸತತ 6ನೇ ದಿನವೂ ಶೋಧಕಾರ್ಯ ಮುಂದುವರಿದಿದೆ. ನವಿಲು ಜಾರಾ ಮತ್ತು ವಾಗುಜಾರಾ ಸೋದರರ ಶವಗಳು ಇಂದು ಸಿಕ್ಕಿವೆ. ಇದುವರೆಗೂ 54 ಮಂದಿ ರಕ್ಷಣೆ ಮಾಡಲಾಗಿದೆ. ಇನ್ನು ಅವಶೇಷಗಳಡಿಯಲ್ಲಿ ಸಿಲುಕಿ ಕೆಲ ದೇಹಗಳು ಗುರುತು ಸಿಗಲಾರದಷ್ಟು ನಜ್ಜುಗುಜ್ಜಾಗಿವೆ. ಕಾರ್ಯಾಚರಣೆ ಸ್ಥಳದಲ್ಲಿ ಸಾಕಷ್ಟು ದುರ್ವಾಸನೆ ಬೀರ್ತಿದ್ದು, ಮೃತದೇಹಗಳನ್ನು ಹೊರ ತೆಗೆಯಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಬಾಡಿ ಸ್ಪ್ರೇ ಬಳಸಿ ಕಾರ್ಯಾಚರಣೆ ನಡೆಸ್ತಿದ್ದಾರೆ. ಬಹುತೇಕ ಇಂದು ಮಧ್ಯಾಹ್ನದ ವೇಳೆಗೆ ರಕ್ಷಣಾಕಾರ್ಯಾಚರಣೆ ಅಂತ್ಯವಾಗಲಿದೆ……