ಅರಸೀಕೆರೆ:
ನಕಲಿ ಚಿನ್ನಾಭರಣಗಳಿಗೆ ದೃಢೀಕರಣ ನೀಡಿ ಲಕ್ಷಾಂತರ ರೂ.ವಂಚಿಸಿದ್ದ ಅಪ್ರೈಸರ್‌ನನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಶಿವಾನಂದ ಕಾಲನಿ ನಿವಾಸಿ ಅಶೋಕ್(48) ಬಂಧಿತ ಆರೋಪಿ. ಈತ ನಗರದ ಎಸ್.ಬಿ.ಐ ಮುಖ್ಯ ಶಾಖೆ ಸೇರಿದಂತೆ ವಿವಿಧ ಉಪಶಾಖೆಗಳಲ್ಲಿ 14,65,000 ರೂ.ಮೌಲ್ಯದ ನಕಲಿ ಚಿನ್ನಾಭರಣಗಳಿಗೆ ದೃಢೀಕರಣ ನೀಡಿ ತಲೆ ಮರೆಸಿಕೊಂಡಿದ್ದ.
ಬ್ಯಾಂಕ್ ವ್ಯವಸ್ಥಾಪಕರ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಕಡೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಈ ಸಂಬಂಧ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ……