ಯಾವ ರಾಶಿಗೆ ಒಳಿತು ಯಾವ ರಾಶಿಗೆ ಕೆಡುಕು.. ?
ಪಂಚಾಂಗ |
---|
ದಶಮಿ ಶುಕ್ರವಾರ ಧನಿಷ್ಠ ನಕ್ಷತ್ರ |
ರಾಹುಕಾಲ :- ರಾಹುಕಾಲ :- ಬೆಳಿಗ್ಗೆ 10: 39 ರಿಂದ 12:08 |
ಯಮಕಂಟಕ ಕಾಲ:- ಮಧ್ಯಾಹ್ನ 03:06 ರಿಂದ 04:35 |
ದಿನ ವಿಶೇಷತೆ ವಿಜಯದಶಮಿ ಹಬ್ಬ |
ಮೇಷ ಹಣಕಾಸಿನ ವ್ಯವಹಾರದಲ್ಲಿ ಜಾಗ್ರತೆ ಅಗತ್ಯ,ಬಂಧುಗಳ ಆಗಮನ,ಮೃಷ್ಠಾನ್ನ ಭೋಜನವನ್ನು ಸವಿಯುವಿರಿ. |
|
ವೃಷಭ ಹಬ್ಬದ ಸಂಭ್ರಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವಿರಿ. ಮಕ್ಕಳಿಗೆ ನೂತನ ವಸ್ತ್ರವನ್ನು ಖರೀದಿಸುವಿರಿ. ವಿವಾಹ ಯೋಗ್ಯ ವಧು ವರರಿಗೆ ಸಂತಸದ ಸುದ್ದಿ. |
|
ಮಿಥುನ
ಆಸ್ತಿ, ಜಮೀನು, ಮನೆಯ ಖರೀದಿ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕು.ಕೆಲಸದಲ್ಲಿ ವಿಳಂಬ ಹಾಗೂ ಒತ್ತಡ ಹೆಚ್ಚು ಕಾಡುತ್ತದೆ. |
|
ಕಟಕ ಸಹೋದರರು ನಿಮ್ಮ ಕಾರ್ಯಕ್ಕೆ ಬೆಂಬಲ ನೀಡುವರು. ಹೊಸ ಎಲೆಕ್ಟ್ರಾನಿಕ್ಸ್ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ. |
|
ಸಿಂಹ ಉದ್ಯೋಗದಲ್ಲಿ ಪ್ರಗತಿ. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ಅನುಕೂಲತೆ ಕಂಡುಬರುವುದು. ಮನೆಯ ವಾತಾವರಣದಲ್ಲಿ ನೆಮ್ಮದಿಯು ಕಂಡುಬರುವುದು.
|
|
ಕನ್ಯಾ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆ ಕಂಡು ಬರುವುದು. ಬಂಧುಮಿತ್ರರೊಡನೆ ವಿರೋಧ. |
|
ತುಲಾ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಲಭ್ಯ,ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು, ಬಂದುಮಿತ್ರರ ಸಹಾಯ. |
|
ವೃಶ್ಚಿಕ ಕಲಹದಿಂದ ದೂರವಿರಿ. ಆರೋಗ್ಯದ ಬಗ್ಗೆ ಕಾಳಜಿ,ಯೋಗ್ಯ ವಯಸ್ಕರಿಗೆ ಕಂಕಣಬಲ ಬರುತ್ತದೆ,ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ಕಾಡುತ್ತದೆ. |
|
ಧನಸ್ಸು
ಜನ್ಮಸ್ಥ ಶನಿಮಹಾರಾಜರು ಕೆಲಸ ಕಾರ್ಯದಲ್ಲಿ ವಿಳಂಬ ಆಗುವುದು,ವೃತ್ತಿಯಲ್ಲಿ ಆಲಸ್ಯವನ್ನು ತಂದುಕೊಡುತ್ತೆ. ಆಂಜನೇಯ ಸ್ತೋತ್ರ ಪಠಿಸಿರಿ |
|
ಮಕರ ಹಬ್ಬದ ಸಂಭ್ರಮ ಮುಗಿಸಿ ದೂರದ ಪ್ರವಾಸವನ್ನು ಕೈಕೊಳ್ಳಲು ತಯಾರಿ ನಡೆಸುವಿರಿ. ಆರೋಗ್ಯದಲ್ಲಿ ಏರುಪೇರು, ಸಹೋದರರಲ್ಲಿ ಭಿನ್ನಾಪ್ರಾಯ. |
|
ಕುಂಭ ಮನೆ ಅಥವಾ ವಾಹನ ಖರೀದಿ ಮಾಡುವ ಬಗ್ಗೆ ಯೋಚಿಸುವಿರಿ, ಕುಟುಂಬದಲ್ಲಿ ವಿನಾಕಾರಣ ಕಲಹಗಳು ,ಹಣಕಾಸಿನ ಸಮಸ್ಯೆ. |
|
ಮೀನ ಕೌಟುಂಬಿಕ ಜೀವನದಲ್ಲಿ ನೆಮ್ಮದಿಯ ವಾತಾವರಣ. ಹೊರಗಡೆಯಿಂದ ಬರಬೇಕಾಗಿದ್ದ ಹಣವು ಈದಿನ ನಿಮ್ಮ ಕೈಸೇರುವುದು. ಆತ್ಮೀಯ ಗೆಳೆಯರ. |