ಕಾರವಾರ:
ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ವಾಪಸಸ್ಸಾಗುತ್ತಿದ್ದ ಬೋಟವೊಂದರಿಂದ ನೌಕಾನೆಲೆ ಅಧಿಕಾರಿಗಳು ಹೆಲಿಕಾಪ್ಟರ್ ಮೇಲಿಂದಲೇ ಮೀನು ಖರೀದಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ಕರ್ನಾಟಕ -ಗೋವಾ ಗಡಿಭಾಗದಲ್ಲಿ ಸಮುದ್ರದಲ್ಲಿ ನಡೆದಿದೆ ಅಂತಾ ಹೇಳಲಾಗತ್ತಾ ಇದೆ. ಮೀನು ಹಿಡಿದು ವಾಪಸ್ಸ್ ಆಗುತ್ತಿದ್ದ ಮೀನುಗಾರರ ಬಳಿ ಮೀನು ಬೇಕಾಗಿರುವ ಬಗ್ಗೆ ಕೇಳಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೇಲಿಂದಲೆ ಹಗ್ಗದ ಮೂಲಕ ಕವರ್ ಬಿಟ್ಟು ಬೋಟ್ ನವರಿಂದ ಮೀನು ಪಡೆದುಕೊಂಡಿದ್ದಾರೆ. ಹೀಗೂ ಮೀನು ಖರೀದಿಸಲು ಬರುತ್ತಾರೆಯೇ ಎಂದು ಜನರು ಮಾತನಾಡಿಕೊಳ್ಳುವಂತಾಗಿದೆ……