Breaking News

ಪುರುಷರಿಗೂ ದೊರೆಯಲಿದೆ ಚೈಲ್ಡ್ ಕೇರ್ ಲೀವ್..!

ಸಿಂಗಲ್ ಪ್ಯಾರೆಂಟ್, ವಿಚ್ಛೇದಿತ ಪುರುಷರು ಹಾಗೂ ವಿಧುರರಿಗೆ ಅನ್ವಯ.....

SHARE......LIKE......COMMENT......

ಹೊಸದಿಲ್ಲಿ: 

ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಪುರುಷ ಉದ್ಯೋಗಿಗಳಿಗೆ ಸೇವಾವಧಿಯಲ್ಲಿ ಒಟ್ಟಾರೆ 730 ದಿನಗಳ ಚೈಲ್ಡ್ ಕೇರ್ ಲೀವ್ ದೊರೆಯಲಿದೆ. ಈಗಾಗಲೇ ಮಹಿಳಾ ಉದ್ಯೋಗಿಗಳಿಗೆ ಈ ಪ್ರಯೋಜನ ದೊರೆಯುತ್ತಿದ್ದು, ಪುರುಷರಿಗೂ ದೊರೆಯಲಿದೆ.ನೂತನ ನಿಯಮದ ಪ್ರಕಾರ ಮೊದಲ 365 ದಿನಗಳಿಗೆ ಪೂರ್ತಿ ಶೇ. 100 ವೇತನ ಪಾವತಿಯಾಗಲಿದ್ದು, ನಂತರದಲ್ಲಿ ಮುಂದಿನ 365 ದಿನಗಳಿಗೆ ಶೇ. 80 ವೇತನ ದೊರೆಯಲಿದೆ.

ಚೈಲ್ಡ್ ಕೇರ್ ಲೀವ್ ಹೊರತಾಗಿ ಮಹಿಳೆಯರು 180 ದಿನಗಳ ವೇತನ ಸಹಿತ ಹೆರಿಗೆ ರಜೆ ಪಡೆಯಬಹುದು, ಪುರುಷರು 15 ದಿನ ರಜೆ ಪಡೆಯಲು ಅವಕಾಶವಿದೆ. ಸಿಂಗಲ್ ಪ್ಯಾರೆಂಟ್ ಮತ್ತು ಅವಲಂಬಿತ ಮಗು ಇರುವ, ವಿಚ್ಛೇದಿತ ಪುರುಷರು ಅಥವಾ ವಿಧುರರಿಗೆ ಇದು ಅನ್ವಯವಾಗಲಿದೆ……