Breaking News

ಪ್ರತಾಪ್ ಸಿಂಹಗೆ FIR ಶಾಕ್..!

ಅಂಚೆ ಮೂಲಕ ಬುಕ್​​ಲೆಟ್​ಗಳನ್ನ ಹಂಚಿದ ಆರೋಪ....

SHARE......LIKE......COMMENT......

ಮೈಸೂರು-ಕೊಡಗು:

ನಾಮಪತ್ರ ಸಲ್ಲಿಕೆ ದಿನವೇ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ದ FIR ದಾಖಲಾಗಿದೆ. ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಅಂಚೆ ಮೂಲಕ ಬುಕ್​​ಲೆಟ್​ಗಳನ್ನ ಹಂಚಿದ ಆರೋಪ ಪ್ರತಾಪ್​ ಸಿಂಹ ಮೇಲಿತ್ತು. ಕೆ.ಎಸ್.ಓ.ಯು.ವ್ಯವಸ್ಥಾಪನಾ ಮಂಡಳಿ ಮಾಜಿ ಸದಸ್ಯ ಎಸ್.ಶಿವರಾಮ್ ನೀಡಿದ ದೂರಿನ ಅನ್ವಯ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳು ದೂರು ದಾಖಲಿಸಿದ್ದರು. ಬುಕ್ ಲೆಟ್ ಗಳಲ್ಲಿ ಪ್ರಚಾರಕರ ಹಾಗೂ ಮುದ್ರಕರ ವಿವರ ಇಲ್ಲದ ಹಿನ್ನೆಲೆಯಲ್ಲಿ ಕ್ರಮ ಕೈಗೊಂಡಿದ್ದು, ನಾಮಪತ್ರ ಸಲ್ಲಿಸುವ ದಿನವೇ ಪ್ರತಾಪ್ ಸಿಂಹಗೆ FIR ಶಾಕ್ ತಟ್ಟಿದೆ…….