Breaking News

ಮೈಸೂರಿನಲ್ಲಿ ರಾಜ್ಯ ಮಟ್ಟದ ಭರತ ನಾಟ್ಯ ಸ್ಪರ್ಧೆ..!

ಸಾಗರದ ಪ್ರದ್ಯುಮ್ನ ಪ್ರಥಮ ಸ್ಥಾನ....

SHARE......LIKE......COMMENT......

ಮೈಸೂರು:

ಭಾರತೀಯ ನೃತ್ಯ ಕಲಾ ಪರಿಷತ್‌ ವತಿಯಿಂದ ನಡೆದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ವಿದ್ವತ್‌ ವಿಭಾಗದಲ್ಲಿ ಸಾಗರದ ಪ್ರದ್ಯುಮ್ನ ಪ್ರಥಮ ಸ್ಥಾನ ಪಡೆದುಕೊಂಡರು. ಬೆಂಗಳೂರಿನ ಬಿ.ಎಸ್‌. ಸಾಗರ ದ್ವಿತೀಯ ಸ್ಥಾನ ಹಾಗೂ ಎಂ. ಜ್ಞಾನವಿ ತೃತೀಯ ಸ್ಥಾನ ಪಡೆದರೆ, ವಿಶೇಷ ಬಹುಮಾನವನ್ನು ಮೌಲ್ಯ ವೆಂಕಟೇಶ್‌ ಮತ್ತು ಪಿ.ಹರ್ಷಿಣಿ ಪಡೆದುಕೊಂಡರು.

ನಗರದ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ವಿದ್ವತ್‌, ಸೀನಿಯರ್‌, ಜೂನಿಯರ್‌ ಹಾಗೂ ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು.ಸೀನಿಯರ್‌ ವಿಭಾಗದಲ್ಲಿ ಮಂಗಳೂರಿನ ಸಿ.ವಿ.ಅನಂತ ಕೃಷ್ಣ (ಪ್ರ), ಹಾಸನದ ಎಲ್‌.ಎಸ್‌.ಲತಾ (ದ್ವಿ) ವೈಷ್ಣವಿ ಜಯರಾಮ್‌ (ತೃ). ಜೂನಿಯರ್‌ ವಿಭಾಗದಲ್ಲಿ ಮೈಸೂರಿನ ಬಿ.ವಿ.ಸ್ಫೂರ್ತಿ ಮತ್ತು ಜಿ.ಪಿ.ಮನನ (ಪ್ರ) ಅನುಷ್ಕಾ ಸುಧಾಕರ ಉಪಾಧ್ಯ ಮತ್ತು ಎಂ.ಚೇತನ (ದ್ವಿ)ಕೆ.ಎಸ್‌.ಸ್ನೇಹವಲ್ಲಿ ಮತ್ತು ಮಹೇಶ್‌ (ತೃ) ಸ್ಥಾನ ಪಡೆದರೆ, ವಿಶೇಷ ಬಹುಮಾನವನ್ನು ಕೆ.ನಿಶಾ, ಕೆ.ನಿತ್ಯಾ, ಆರ್‌.ನಂದನಾ ಮತ್ತು ಬಿ.ರುಚಿರ ಪಡೆದುಕೊಂಡರು.

ಸಬ್‌ ಜೂನಿಯರ್‌ ವಿಭಾಗದಲ್ಲಿ ಸುಜ್ಞಾನಿ ಜಗನ್ನಾಥ್‌ (ಪ್ರ), ಜಿ. ಶ್ರೇಯಾ (ದ್ವಿ) ಅದ್ವೀಕ ಮೈತ್ರಿ (ತೃ) ವಿಶೇಷ ಬಹುಮಾನವನ್ನು ವಾಹಿನಿ, ಸೌಗಂಧಿಕ ಹಾಗೂ ಎಂ.ಎ.ಪೃಥ್ವಿ ಪಡೆದರು. ತೀರ್ಪುಗಾರರಾಗಿ ಡಾ.ಮಂಗಳ ಶೇಖರ್‌, ಪದ್ಮಿನಿ ಅಚ್ಚೆ, ಗಿರೀಶ್‌ ಪುತ್ತೂರು, ಎಚ್‌.ಆರ್‌.ಉನ್ನತ್‌, ಬಿ.ಎಸ್‌.ಹಿಂದೂ, ಸಹನಾ ಪ್ರದೀಪ್‌ ಭಟ್ಟ್‌, ಷಡಕ್ಷ ರಿ, ಸಾರ್ಗ ಹಾಗೂ ಮಂಗಳಾ ರೈ ಭಾಗವಹಿಸಿದ್ದರು.

ಬಹುಮಾನ ವಿತರಣೆ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಭರತ ನಾಟ್ಯ ಕಲಾವಿದೆ ಡಾ.ವಸುಂಧರ ದೊರೆಸ್ವಾಮಿ, ರಿಯಾಲಿಟಿ ಶೋಗಳಿಂದಾಗಿ ಶಾಸ್ತ್ರೀಯ ಕಲೆಗಳಿಗೆ ಬೇಡಿಕೆ ಕಡಿಮೆಯಾಗುತ್ತಿದೆ. ಬೇರೆ ದೇಶಗಳಲ್ಲಿ ನಮ್ಮ ನಾಡಿನ ಕಲೆ, ಸಂಸ್ಕೃತಿಯನ್ನು ಬಹಳ ಭಕ್ತಿ ಮತ್ತು ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಆದರೆ, ನಮ್ಮಲ್ಲಿ ಕಲಿಯುವಿಕೆಯ ಆಸಕ್ತಿ ಕಡಿಮೆಯಾಗುತ್ತಿದೆ ಎಂದರು……